Home ಕರಾವಳಿ ಗ್ರಾಮ ಸಮುದಾಯ ಜಾಗೃತಿ ಕಾರ್ಯಕ್ರಮ ಸಂಪನ್ನ

ಗ್ರಾಮ ಸಮುದಾಯ ಜಾಗೃತಿ ಕಾರ್ಯಕ್ರಮ ಸಂಪನ್ನ

ಮಂಗಳೂರು: ಬಂಟ್ವಾಳ ತಾಲೂಕಿನ ಬಡಗ ಬೆಳ್ಳೂರು ಗ್ರಾಮದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಮನ್ವಯದಲ್ಲಿ ಎಚ್.ಪಿ.ಸಿ.ಎಲ್ ನ ಎಲ್’ಪಿಜಿ ಪೈಪ್’ಲೈನ್ ಮತ್ತು ಪೆಟ್ರೋನೆಟ್ ಎಂಎಚ್’ಬಿ ಪೈಪ್’ಲೈನ್ ಜಂಟಿ ಆಫ್’ಸೈಟ್ ತುರ್ತು ಅಣಕು ಕಾರ್ಯಾಚರಣೆ ಮತ್ತು ಗ್ರಾಮ ಸಮುದಾಯ ಜಾಗೃತಿ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.


ಕಾರ್ಖಾನೆಗಳ ಉಪನಿರ್ದೇಶಕ ಡಾ. ರಾಜೇಶ್ ಮಿಸ್ತ್ರಿಕೋಟಿ, ಜಿಲ್ಲಾ ವಿಪತ್ತು ನಿರ್ವಹಣಾ ಡಿಡಿಎಂಎ ವಿಜಯ್ ಕುಮಾರ್ ಪೂಜಾರ್, ಡಿಎಫ್’ಒ ಭರತ್ ಕುಮಾರ್, ಆರೋಗ್ಯಾಧಿಕಾರಿ ಶಿವ ಕುಮಾರ್ ಇತರ ಸ್ಥಳೀಯ ಆಡಳಿತ ಮತ್ತು 200ಕ್ಕೂ ಹೆಚ್ಚಿನ ಗ್ರಾಮಸ್ಥರು ಭಾಗವಹಿಸಿದ್ದರು.


ಎಚ್.ಪಿ.ಸಿ.ಎಲ್, ಎಲ್’ಪಿಜಿ ಪೈಪ್’ಲೈನ್ ನ ಜಿ.ಎಂ. ಜಿ. ವಿನೋದ್ ಕುಮಾರ್ ಎಚ್.ಪಿ.ಸಿ.ಎಲ್, ಎಲ್’ಪಿಜಿ ಪೈಪ್’ಲೈನ್ ಕಾರ್ಯಾಚರಣೆಗಳ ಬಗ್ಗೆ ಸಾರ್ವಜನಿಕರನ್ನು ಉದ್ದೇಶಿಸಿ, ಪೈಪ್’ಲೈನ್’ನ ಸನ್ನದ್ಧತೆ ಮತ್ತು ಎಲ್’ಪಿಜಿ ಸೋರಿಕೆ ಸಂಬಂಧಿತ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಎಚ್’ಪಿಸಿಎಲ್ ನೊಂದಿಗೆ ಲಭ್ಯವಿರುವ ಅತ್ಯಾಧುನಿಕ ಉಪಕರಣಗಳ ಬಗ್ಗೆ ಪ್ರಸ್ತಾಪಿಸಲಾಗಿದೆ, ಟೋಲ್ ಫ್ರೀ ನಂ. 18001801276 ಮೂಲಕ ಪೈಪ್’ಲೈನ್’ನಲ್ಲಿ ಯಾವುದೇ ತುರ್ತು ಸಂದರ್ಭದಲ್ಲಿ ಪೈಪ್’ಲೈನ್ ನಿಯಂತ್ರಣ ಕೊಠಡಿಯನ್ನು ತಲುಪಲು ಪೈಪ್’ಲೈನ್ ಆರ್ ಒಯು ಉದ್ದಕ್ಕೂ ಇರುವ ಎಲ್ಲಾ ಎಚ್ಚರಿಕೆ ಫಲಕಗಳಲ್ಲಿ ಲಭ್ಯವಿದೆ ಎಂದರು.

Join Whatsapp
Exit mobile version