ಮಂಡ್ಯ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮುಂದಿನ ಮುಖ್ಯಮಂತ್ರಿ ಆಗುವ ಲಕ್ಷಣ ಇದೆ ಎಂದು ಸಚಿವ ಕೆ.ಸಿ.ನಾರಾಯಣ ಗೌಡ ಹೇಳಿದ್ದಾರೆ.
ಮಂಡ್ಯದ ಖಾಸಗಿ ಹೋಟೇಲ್ ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಅವರನ್ನು ಬಹುಮತದಿಂದ ಗೆಲ್ಲಿಸಿದರೆ ಮಂಡ್ಯ ಜಿಲ್ಲೆಯಲ್ಲಿ ನಮಗೆ ಮತಷ್ಟು ಶಕ್ತಿ ಬರುತ್ತೆ. ನಾವು ಮಾಡಿದ ಕೆಲಸವನ್ನ ಎಲ್ಲರಿಗೂ ತಿಳಿಸಬೇಕು. ಮಂಡ್ಯಕ್ಕೆ ಎರಡೂ ಪಕ್ಷದಿಂದ ದೊಡ್ಡ ಕೊಡುಗೆ ಏನು ಇಲ್ಲ. ನಮ್ಮ ಯಡಿಯೂರಪ್ಪ ಅವರು ಕೊಡುಗೆ ಕೊಟ್ಟಿದ್ದಾರೆ. 2 ಸಾವಿರಕೋಟಿ ಜಲಧಾರೆ ಕೊಟ್ಟಿದ್ದಾರೆ. ನಮ್ಮ ಯಡಿಯೂರಪ್ಪ ಅವರು ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ವಿಜಯೇಂದ್ರ ಮುಂದಿನ ಮುಖ್ಯಮಂತ್ರಿ: ಸಚಿವ ಕೆ.ಸಿ.ನಾರಾಯಣ ಗೌಡ
Prasthutha|