Home ಟಾಪ್ ಸುದ್ದಿಗಳು ವಿಜಯೇಂದ್ರ ರಾಜ್ಯಾಧ್ಯಕ್ಷ ಪದವಿ 3 ವರ್ಷ ಮಾತ್ರ: ಪ್ರಹ್ಲಾದ್ ಜೋಶಿ

ವಿಜಯೇಂದ್ರ ರಾಜ್ಯಾಧ್ಯಕ್ಷ ಪದವಿ 3 ವರ್ಷ ಮಾತ್ರ: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಬಿ.ವೈ.ವಿಜಯೇಂದ್ರ 3 ವರ್ಷ ಮಾತ್ರ ಅಧ್ಯಕ್ಷರಾಗಿರುತ್ತಾರೆ. 3 ವರ್ಷದ ಬಳಿಕ ಮತ್ತೊಬ್ಬ ಕಾರ್ಯಕರ್ತ ಅಧ್ಯಕ್ಷರಾಗುತ್ತಾರೆ ಎಂದು ಹೇಳಿದ್ದಾರೆ. ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಹ್ಲಾದ್ ಜೋಶಿ,
ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಬಿ.ವೈ.ವಿಜಯೇಂದ್ರ ನೇಮಕವನ್ನು ನಾನು ಹರ್ಷದಿಂದ ಸ್ವಾಗತಿಸುತ್ತೇನೆ ಎಂದು ಹೇಳಿದ ಬಳಿಕ ವುಜಯೇಂದ್ರರ ಹುದ್ದೆಯ ಆಯುಷ್ಯವನ್ನು ಹೇಳಿದ್ದಾರೆ.

ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಂಡಿದೆ. ಯುವ ನಾಯಕತ್ವಕ್ಕೆ ಅವಕಾಶ ಕೊಡಬೇಕು ಎಂದು ಪಕ್ಷ ತೀರ್ಮಾನಿಸಿದೆ. ನಮ್ಮ ಸಹಕಾರ ವಿಜಯೇಂದ್ರರಿಗಿದೆ ಎಂದು ಹೇಳಿದರು.

ವಿಜಯೇಂದ್ರ ನೇಮಕಕ್ಕೆ ಸಿ.ಟಿ. ರವಿ, ಅರವಿಂದ್ ಬೆಲ್ಲದ್ ಅಸಮಾಧಾನ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ನಾನು ಬೆಲ್ಲದ್ ಅವರ ಜೊತೆ ಮಾತನಾಡುತ್ತೇನೆ. ಸಣ್ಣಪುಟ್ಟ ಅಸಮಾಧಾನವಿದೆ. ನಾವೆಲ್ಲರೂ ಸೇರಿ ಸರಿ ಮಾಡುತ್ತೇವೆ ಎಂದಿದ್ದಾರೆ.

Join Whatsapp
Exit mobile version