Home ಟಾಪ್ ಸುದ್ದಿಗಳು ವಿಜಯ ಮಲ್ಯ ನನ್ನ ಈಮೇಲ್ ಗೂ ಉತ್ತರಿಸುತ್ತಿಲ್ಲ: ನ್ಯಾಯಾಧೀಶರ ಮುಂದೆ ವಕೀಲನ ಅಳಲು

ವಿಜಯ ಮಲ್ಯ ನನ್ನ ಈಮೇಲ್ ಗೂ ಉತ್ತರಿಸುತ್ತಿಲ್ಲ: ನ್ಯಾಯಾಧೀಶರ ಮುಂದೆ ವಕೀಲನ ಅಳಲು


ನವದೆಹಲಿ: ಭಾರತದ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂ.ವಂಚಿಸಿ ಪರಾರಿಯಾಗಿದ್ದ ಮದ್ಯದ ದೊರೆ ವಿಜಯ್ ಮಲ್ಯ, ತನ್ನ ಪರ ವಾದಿಸುತ್ತಿದ್ದ ವಕೀಲರಿಗೆ ಸ್ಪಂದಿಸುತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ.


ಇದೀಗ ಹೊರದೇಶದಲ್ಲಿರುವ ವಿಜಯ್ ಮಲ್ಯ, ವಿಚಾರಣೆಯಿಂದ ತನ್ನ ಪ್ರಕರಣವನ್ನು ಕೈಬಿಡುವಂತೆ ಒತ್ತಾಯಿಸಿದ್ದಾರೆ ಎಂದು ನ್ಯಾಯವಾದಿ ಇ.ಸಿ.ಅಗರ್ವಾಲ್ ಹೇಳಿದ್ದಾರೆ.


ಸುಪ್ರೀಂ ಕೋರ್ಟ್ ನ್ಯಾ. ಡಿ.ವೈ.ಚಂದ್ರಚೂಡ್ ಮತ್ತು ನ್ಯಾ. ಹಿಮಾ ಕೊಹ್ಲಿ ಅವರನ್ನು ಒಳಗೊಂಡ ನ್ಯಾಯಪೀಠದಲ್ಲಿ ವಿಜಯ್ ಮಲ್ಯ ಕುರಿತ ವಂಚನೆ ಪ್ರಕರಣದ ವಿಚಾರಣೆ ವೇಳೆ ಮಲ್ಯ ಪರ ನ್ಯಾಯವಾದಿ ಇ.ಸಿ.ಅಗರ್ವಾಲ್ ತಮ್ಮ ಅಳಲನ್ನು ತೋಡಿಕೊಂಡರು.


ನನಗಿರುವ ಮಾಹಿತಿ ಪ್ರಕಾರ ವಿಜಯ್ ಮಲ್ಯ ಬ್ರಿಟನ್ ನಲ್ಲಿ ಇದ್ದಾರೆ. ಅವರ ಈಮೇಲ್ ವಿಳಾಸ ಗೊತ್ತಿದೆ. ಆದರೆ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಮೇಲ್ ಗೂ ಉತ್ತರಿಸುತ್ತಿಲ್ಲ ಎಂದು ನ್ಯಾಯವಾದಿ ಇ.ಸಿ.ಅಗರ್ವಾಲ್ ತಮ್ಮ ಅಸಹಾಯಕತೆಯನ್ನು ಸುಪ್ರೀಂ ಕೋರ್ಟ್ ನ ಮುಂದಿಟ್ಟಿದ್ದಾರೆ.

Join Whatsapp
Exit mobile version