Home ಟಾಪ್ ಸುದ್ದಿಗಳು ಬಿಹಾರ ಸರ್ಕಾರಿ ನೌಕರನ ಮನೆ ಮೇಲೆ ವಿಜಿಲೆನ್ಸ್ ಅಧಿಕಾರಿಗಳಿಂದ ದಾಳಿ, 1 ಕೋಟಿ ರೂ.ನಗದು ವಶ

ಬಿಹಾರ ಸರ್ಕಾರಿ ನೌಕರನ ಮನೆ ಮೇಲೆ ವಿಜಿಲೆನ್ಸ್ ಅಧಿಕಾರಿಗಳಿಂದ ದಾಳಿ, 1 ಕೋಟಿ ರೂ.ನಗದು ವಶ

ಪಾಟ್ನಾ: ಬಿಹಾರದ ಕಿಶನ್ ಗಂಜ್ ನಲ್ಲಿರುವ ಗ್ರಾಮೀಣ ಕಾಮಗಾರಿ ಇಲಾಖೆಯ (ಆರ್ ಡಬ್ಲ್ಯುಡಿ) ಕಾರ್ಯನಿರ್ವಾಹಕ ಎಂಜಿನಿಯರ್ ಸಂಜಯ್ ಕುಮಾರ್ ರಾಯ್ ಅವರ ನಿವಾಸದ ಮೇಲೆ ವಿಚಕ್ಷಣಾ ದಳ ಶನಿವಾರ ದಾಳಿ ನಡೆಸಿ ಕೋಟ್ಯಂತರ ರೂ.ನಗದನ್ನು ವಶಪಡಿಸಿಕೊಂಡಿದೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಿಯ ಎಂಜಿನಿಯರ್ ಮತ್ತು ಕ್ಯಾಷಿಯರ್ ಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಆರ್ ಡಬ್ಲ್ಯುಡಿ ಕಿಶನ್ ಗಂಜ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿರುವ ಸಂಜಯ್ ಕುಮಾರ್ ರಾಯ್ ಅವರ ನಿವಾಸದ ಮೇಲೆ ವಿಚಕ್ಷಣಾ ತಂಡ ದಾಳಿ ನಡೆಸಿದೆ.

ಶೋಧ ಕಾರ್ಯಾಚರಣೆ ವೇಳೆ ಅವರ ನಿವಾಸದಲ್ಲಿ ಸುಮಾರು 1 ಕೋಟಿ ರೂ. ನಗದು ಪತ್ತೆಯಾಗಿದ್ದು, ಇತರ ಹಲವಾರು ದಾಖಲೆಗಳು ಸಹ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp
Exit mobile version