Home ಟಾಪ್ ಸುದ್ದಿಗಳು ವಿಧಾನಸೌಧದ ಗುಮ್ಮಟದಲ್ಲಿ ಬಿರುಕು: ಪರಿಶೀಲನೆ ನಡೆಸಿದ ಸ್ಪೀಕರ್ ಯುಟಿ ಖಾದರ್

ವಿಧಾನಸೌಧದ ಗುಮ್ಮಟದಲ್ಲಿ ಬಿರುಕು: ಪರಿಶೀಲನೆ ನಡೆಸಿದ ಸ್ಪೀಕರ್ ಯುಟಿ ಖಾದರ್

ಬೆಂಗಳೂರು: ವಿಧಾನಸೌಧದ ಗುಮ್ಮಟದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಸ್ಪೀಕರ್ ಯು ಟಿ ಖಾದರ್ ಶನಿವಾರ ದಿಢೀರ್ ಪರಿಶೀಲನೆ ನಡೆಸಿದ್ದಾರೆ.


ವಿಧಾನಸೌಧದ ಪೂರ್ವ ದಿಕ್ಕಿನಲ್ಲಿ ಇರುವ ಗುಮ್ಮಟದಲ್ಲಿ ಬಿರುಕು ಮೂಡಿದ್ದು, ಮಳೆ ನೀರು ಸೋರಿಕೆಯಾಗುತ್ತಿದೆ. ಈ ಕುರಿತು ಮಾತನಾಡಿದ ಅವರು, ‘ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಆದರೂ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ನಾನು ತರುತ್ತೇನೆ ಎಂದರು.


ಇದು ಡಿಪಿಆರ್ ಹಾಗೂ ಲೋಕೋಪಯೋಗಿ ಇಲಾಖೆಯವರ ಅಡಿಯಲ್ಲಿ ಬರುತ್ತದೆ. ಅವರ ಗಮನಕ್ಕೆ ತಂದು ಸರಿ ಪಡಿಸಲು ಹೇಳುತ್ತೇನೆ. ಇದೊಂದು ಬಹಳ ವರ್ಷದ ಕಟ್ಟಡವಾಗಿದ್ದರಿಂದ ಕೆಲವೊಂದು ಲೋಪದೋಷ ಆಗಿರಬಹುದು. ನಾನು ಆದಷ್ಟು ಬೇಗ ಮುಖ್ಯಮಂತ್ರಿ ಅವರಿಗೆ ವಿಚಾರ ತಿಳಿಸುತ್ತೇನೆ ಎಂದು ಹೇಳಿದರು.

Join Whatsapp
Exit mobile version