Home ಟಾಪ್ ಸುದ್ದಿಗಳು ಬೈಕ್ ನಲ್ಲಿ ಆರು ಮಂದಿಯ ಸಂಚಾರ: ಅತಿರೇಕದ ವೀಡಿಯೋ ವೈರಲ್

ಬೈಕ್ ನಲ್ಲಿ ಆರು ಮಂದಿಯ ಸಂಚಾರ: ಅತಿರೇಕದ ವೀಡಿಯೋ ವೈರಲ್

ಮುಂಬೈ: ಮುಂಬೈನ ಅಂಧೇರಿ ಬಳಿ ಬೈಕ್ ನಲ್ಲಿ ಆರು ಮಂದಿ ಸಂಚರಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ವೀಡಿಯೋದಲ್ಲಿ, ದ್ವಿಚಕ್ರ ವಾಹನದಲ್ಲಿ ಐದು ಮಂದಿ ಸೀಟಿನಲ್ಲಿ ಕುಳಿಕೊಂಡರೆ ಓರ್ವ ವ್ಯಕ್ತಿ ಹಿಂಬದಿ ಸವಾರನ ಭುಜದ ಮೇಲೆ ಕುಳಿತುಕೊಂಡು ಹೋಗುವುದನ್ನು ಕಾಣಬಹುದು. ಯಾರು ಕೂಡ ಹೆಲ್ಮೆಟ್ ಧರಿಸಿಲ್ಲ. ಟ್ರಾಫಿಕ್ ನಡುವೆ ಕಾರಿನೊಳಗಿನಿಂದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಕ್ಯಾಮರಾ ಮೂಲಕ ಯುವಕರ ದುಸ್ಸಾಹಸದ ಸಂಚಾರವನ್ನು ಸೆರೆಹಿಡಿದಿದ್ದಾರೆ.
ರೋಡ್ಸ್ ಆಫ್ ಮುಂಬೈ ಎಂಬ ಹೆಸರಿನ ಖಾತೆಯಿಂದ ವೀಡಿಯೊವನ್ನು ಮರುಹಂಚಿಕೆ ಮಾಡಲಾಗಿದ್ದು, ಮುಂಬೈ ಟ್ರಾಫಿಕ್ ಪೊಲೀಸರಿಗೆ ತಿಳಿಸಿದೆ. ಟ್ವೀಟ್ ಗೆ ಪ್ರತಿಕ್ರಿಯಿಸಿದ ಮುಂಬೈ ಟ್ರಾಫಿಕ್ ಪೊಲೀಸ್, ಇದನ್ನು ಪರಿಶೀಲಿಸುವಂತೆ ಡಿಎನ್ ನಗರ ಸಂಚಾರ ವಿಭಾಗಕ್ಕೆ ನಿರ್ದೇಶಿಸಿದೆ ಎಂದು ಹೇಳಿದೆ.

Join Whatsapp
Exit mobile version