Home ರಾಜ್ಯ ಪಂಚಾಯತ್ ಕಚೇರಿಯಲ್ಲಿ ಪಿಡಿಒ ಜೊತೆ ಗ್ರಾಪಂ ಸದಸ್ಯನ ಸರಸ: ವೀಡಿಯೋ ವೈರಲ್

ಪಂಚಾಯತ್ ಕಚೇರಿಯಲ್ಲಿ ಪಿಡಿಒ ಜೊತೆ ಗ್ರಾಪಂ ಸದಸ್ಯನ ಸರಸ: ವೀಡಿಯೋ ವೈರಲ್

ತುಮಕೂರು: ಸಚಿವ ಮಾಧುಸ್ವಾಮಿ ಬೆಂಬಲಿಗ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮತ್ತು ಹಾಲಿ ಗ್ರಾಪಂ ಸದಸ್ಯ ಪ್ರಸನ್ನ ಕುಮಾರ್ ಮತ್ತು ಜೆಸಿಪುರ ಪಿಡಿಓ ಕೋಮಲ ಗ್ರಾಪಂ ಕಚೇರಿಯಲ್ಲೇ ಸರಸವಾಡಿದ್ದಾರೆ.

ಕಚೇರಿಯಲ್ಲೇ ಇಬ್ಬರು ಅಸಭ್ಯ ವರ್ತನೆ ಮಾಡಿದ್ದು, ಪ್ರಸನ್ನ ಕುಮಾರ್ ಪದೇ ಪದೇ ಪಿಡಿಓ ಬಳಿ ಹೋಗಿ ಚುಂಬಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಆ ದೃಶ್ಯಗಳು ಎಲ್ಲೆಡೆ ವೈರಲ್ ಆಗಿವೆ.


ಇದರ ಬೆನ್ನಲ್ಲೇ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಗ್ರಾಮ ಪಂ‌ಚಾಯತ್ ಸದಸ್ಯ ಪ್ರಸನ್ನ ಕುಮಾರ್ ಸದಸ್ಯತ್ವ ರದ್ದು ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.


ಸದಸ್ಯನ ಜೊತೆ ಪ್ರಣಯದಾಟದ ಜೊತೆಗೆ PDO ಲಂಚ ಕೇಳುವ ಆಡಿಯೋ ಕೂಡ ವೈರಲ್ ಆಗಿದೆ. ಕಚೇರಿ ನೌಕರರ ಸಂಬಳ ನೀಡಲು ಕೋಮಲ ಐದು ಸಾವಿರಕ್ಕೆ ಬೇಡಿಕೆ ಇಟ್ಟಿದ್ದಾರೆ. ಐಓಗೆ 500 ಕೊಡಿ ನನಗೆ 5000 ಕೊಡಿ ಎಂದು ಆಕೆ ಬೇಡಿಕೆ ಇಟ್ಟಿದ್ದು, ಆ ಆಡಿಯೋ ವೈರಲ್ ಆಗಿದೆ.

Join Whatsapp
Exit mobile version