Home ಟಾಪ್ ಸುದ್ದಿಗಳು ತಂದೆಯ ಎದುರೇ ಮಗಳ ಅಪಹರಣ: ವೀಡಿಯೋ ವೈರಲ್

ತಂದೆಯ ಎದುರೇ ಮಗಳ ಅಪಹರಣ: ವೀಡಿಯೋ ವೈರಲ್

ರಾಜಣ್ಣ ಸಿರ್ಸಿಲ್ಲ: ತಂದೆಯ ಎದುರೇ ಮಗಳನ್ನು ಅಪಹರಣ ಮಾಡಿರುವ ಘಟನೆ ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ಚಂದೂರ್ತಿ ಮಂಡಲದಲ್ಲಿ ನಡೆದಿದೆ.

ಬೆಳಿಗ್ಗೆ ಕೆಲವರು ಮಾಸ್ಕ್ ಧರಿಸಿ ಮೂಡಪಲ್ಲಿ ಗ್ರಾಮದ ಮನೆಯೊಂದಕ್ಕೆ ಕಾರಿನಲ್ಲಿ ಬಂದಿದ್ದಾರೆ. ಯುವತಿ ಹೊರಗೆ ಬಂದಾಗ ಅಪಹರಣ ಮಾಡಲು ಮುಂದಾಗಿದ್ದಾರೆ. ಇದನ್ನು ಗಮನಿಸಿದ ಯುವತಿಯ ತಂದೆ ತಡೆಯಲು ಯತ್ನಿಸಿದ್ದಾರೆ. ಆಗ ಅಪಹರಣಕಾರರು ತಂದೆಯನ್ನು ತಳ್ಳಿ ಕಾರಿನಲ್ಲಿ ಕರೆದೊಯ್ದಿದ್ದಾರೆ. ಯುವತಿ ಕುಟುಂಬಸ್ಥರು ಅದೇ ಗ್ರಾಮದ ಕಾಟುಕುರಿ ಜಾನ್ ಎಂಬ ವ್ಯಕ್ತಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.


ಒಂದು ವರ್ಷದ ಹಿಂದೆ ಜಾನ್ – ಯುವತಿ ಓಡಿ ಹೋಗಿದ್ದರು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಜಾನ್, ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ್ದಾನೆ ಎಂದು ಪೋಷಕರು ದೂರು ನೀಡಿದ್ದಾರೆ.

Join Whatsapp
Exit mobile version