Home ಟಾಪ್ ಸುದ್ದಿಗಳು ಪಾದಚಾರಿ ಸೇತುವೆ ಮೇಲೆ ಸಂಚರಿಸಿದ ಆಟೋ: ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್

ಪಾದಚಾರಿ ಸೇತುವೆ ಮೇಲೆ ಸಂಚರಿಸಿದ ಆಟೋ: ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್

ಮುಂಬೈ: ಆಟೋ ಚಾಲಕನೊಬ್ಬ ಹೆದ್ದಾರಿ ದಾಟಲು ಪಾದಚಾರಿ ಸೇತುವೆ ಬಳಸಿದ ಘಟನೆ ಮುಂಬೈನ ವಿರಾರ್ ಬಳಿ ನಡೆದಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಹೆದ್ದಾರಿಯ ಒಂದು ಭಾಗದಿಂದ ಬ್ರಿಡ್ಜ್ ಮೇಲಕ್ಕೆ ಆಟೋವನ್ನು ಹತ್ತಿಸಿದ ಚಾಲಕ, ಇನ್ನೊಂದು ಕಡೆಯಿಂದ ಇಳಿದಿದ್ದಾನೆ. ಈ ದೃಶ್ಯಾವಳಿಯನ್ನು ಮೊಬೈಲ್ ಕ್ಯಾಮರಾ ಮೂಲಕ ಸೆರೆಹಿಡಿಯಲಾಗಿದ್ದು, ‘ಇಟ್ಸ್ ಮೈ ಲೈಫ್’ ಎಂಬ ಬ್ಯಾಗ್ರೌಂಡ್ ಹಾಡಿನೊಂದಿಗೆ ವೈರಲ್ ಮಾಡಲಾಗಿದೆ.


ವಿಡಿಯೋ ಟ್ವಿಟ್ ಮಾಡಿರುವ ಮುಂಬೈ ಪೊಲೀಸರು, ವ್ಯಕ್ತಿಯ ವಿರುದ್ಧ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಸ್ಥಳದ ನಿಖರ ಮಾಹಿತಿ ನೀಡುವಂತೆ ಮಾನವಿ ಮಾಡಿದ್ದಾರೆ.

Join Whatsapp
Exit mobile version