Home ಟಾಪ್ ಸುದ್ದಿಗಳು ಬೆಳಗಾವಿಯ 10 ಕ್ಷೇತ್ರಗಳಲ್ಲಿ ಮರಾಠರ ಬೆಂಬಲವಿಲ್ಲದೆ ಗೆಲುವು ಅಸಾಧ್ಯ: ರಮೇಶ್ ಜಾರಕಿಹೊಳಿ

ಬೆಳಗಾವಿಯ 10 ಕ್ಷೇತ್ರಗಳಲ್ಲಿ ಮರಾಠರ ಬೆಂಬಲವಿಲ್ಲದೆ ಗೆಲುವು ಅಸಾಧ್ಯ: ರಮೇಶ್ ಜಾರಕಿಹೊಳಿ

ಬೆಳಗಾವಿ: ಜಿಲ್ಲೆಯ 10 ಕ್ಷೇತ್ರಗಳಲ್ಲಿ ಮರಾಠರ ಬೆಂಬಲ ಅಗತ್ಯ. ಮರಾಠ ಸಮುದಾಯದ ಬೆಂಬಲ ಇಲ್ಲದೇ ಯಾವ ಪಕ್ಷವಾದರೂ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ಜಿಲ್ಲೆಯ ಗೋಕಾಕ್​ನಲ್ಲಿ ಆಯೋಜಿಸಿದ್ದ ಕ್ಷತ್ರಿಯ ಮರಾಠ ಸಮಾವೇಶದಲ್ಲಿ ಅವರು ಮಾತನಾಡಿ, ರಾಜಕೀಯ ಪಕ್ಷಗಳು ನಮ್ಮ ಬಳಿ ಬರಬೇಕು ಅಂದ್ರೆ ಒಗ್ಗಟ್ಟಾಗಬೇಕು. ಚುನಾವಣೆಯಲ್ಲಿ ಒಗ್ಗಟ್ಟಾಗಿ ಮುಗಿದ ಮೇಲೆ ಮನೆಯಲ್ಲಿದ್ರೆ ಆಗಲ್ಲ. ಜಿಲ್ಲೆಯ 3 ಕ್ಷೇತ್ರಗಳಲ್ಲಿ ಯಾರ ಬೆಂಬಲವಿಲ್ಲದಿದ್ದರೂ ಮರಾಠರು ಗೆಲುವು ಸಾಧಿಸುತ್ತಾರೆ ಎಂದು ಹೇಳಿದರು.

Join Whatsapp
Exit mobile version