Home ಟಾಪ್ ಸುದ್ದಿಗಳು ಉಪ ರಾಷ್ಟ್ರಪತಿ ಚುನಾವಣೆ: ಮಾರ್ಗರೇಟ್ ಆಳ್ವ ನಾಮಪತ್ರ ಸಲ್ಲಿಕೆ, ರಾಹುಲ್, ಖರ್ಗೆ ಭಾಗಿ

ಉಪ ರಾಷ್ಟ್ರಪತಿ ಚುನಾವಣೆ: ಮಾರ್ಗರೇಟ್ ಆಳ್ವ ನಾಮಪತ್ರ ಸಲ್ಲಿಕೆ, ರಾಹುಲ್, ಖರ್ಗೆ ಭಾಗಿ

ನವದೆಹಲಿ: ಉಪರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿರುವ ಮಂಗಳೂರು ಮೂಲದ ಮಾರ್ಗರೇಟ್ ಆಳ್ವ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.

 ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎನ್ ಸಿಪಿ ವರಿಷ್ಠ ಶರತ್ ಪವಾರ್, ಸಿಪಿಐ ಎಂ ಪಕ್ಷದ ಸೀತಾರಾಮ್ ಯೆಚೂರಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

ಬರುವ ಆಗಸ್ಟ್ ತಿಂಗಳ 10ನೇ ತಾರೀಖಿನಂದು ಹಾಲಿ ಉಪರಾಷ್ಟ್ರಪತಿ ಆಗಿರುವ ವೆಂಕಯ್ಯ ನಾಯ್ಡು ಅವರ ಅಧಿಕಾರ ಅವಧಿಯು ಮುಕ್ತಾಯಗೊಳ್ಳುವ ಹಿನ್ನೆಲೆ ನೂತನ ಉಪರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್ 6ನೇ ತಾರೀಕಿನಂದು ಮತದಾನ ನಡೆಯಲಿದೆ.

Join Whatsapp
Exit mobile version