Home ಟಾಪ್ ಸುದ್ದಿಗಳು ಅರಸೀಕೆರೆಯಲ್ಲಿ ಸಂಘಪರಿವಾರದ ಮುಖಂಡನಿಂದ ಪ್ರಚೋದನಾಕಾರಿ ಭಾಷಣ: ಜಮಾಅತ್ ಕಮಿಟಿಯಿಂದ ದೂರು

ಅರಸೀಕೆರೆಯಲ್ಲಿ ಸಂಘಪರಿವಾರದ ಮುಖಂಡನಿಂದ ಪ್ರಚೋದನಾಕಾರಿ ಭಾಷಣ: ಜಮಾಅತ್ ಕಮಿಟಿಯಿಂದ ದೂರು

ಅರಸೀಕೆರೆ: ಹಾಸನದ ಅರಸೀಕೆರೆಯಲ್ಲಿ ವಿ.ಎಚ್.ಪಿ, ಬಜರಂಗದಳ ವತಿಯಿಂದ ಬುಧವಾರ ಸ್ಥಳೀಯಾಡಳಿದ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಂಘಪರಿವಾರದ ನಾಯಕರು ಪ್ರಚೋದನಾಕಾರಿ ಭಾಷಣ ಮಾಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಈ ಬಗ್ಗೆ ಗುರುವಾರ ಸುನ್ನಿ ಮುಸ್ಲಿಮ್ ಜಮಾಅತ್ ಕಮಿಟಿ ನೇತೃತ್ವದಲ್ಲಿ ನೂರಾರು ಮುಸ್ಲಿಮರು ಅರಸೀಕೆರೆಯಲ್ಲಿ ಪ್ರತಿಭಟನೆ ನಡೆಸಿ,ತಾಲೂಕು ಆಡಳಿತ ಕಚೇರಿವರೆಗೆ ಜಾಥಾ ನಡೆಸಲು ಮುಂದಾದರು. ಆದರೆ ಪೊಲೀಸರು ಜಾಥಾಗೆ ಅನುಮತಿ ನಿರಾಕರಿಸಿದರು. ಆಗ ಪ್ರತಿಭಟನಕಾರರು ರಸ್ತೆಯಲ್ಲೇ ಪ್ರತಿಭಟನೆ ನಡೆಸಿ, ಸಂಘಪರಿವಾರದ ನಾಯಕರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಡಿವೈಎಸ್ ಪಿ, ಇನ್ಸ್ ಪೆಕ್ಟರ್ ಸೇರಿದಂತೆ ಹಿರಿಯ ಅಧಿಕಾರಿಗಳು ಧಾವಿಸಿ ಮನವಿ ಪತ್ರ ಸ್ವೀಕರಿಸಿ, ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.

ಬಜರಂಗದಳದ ಮುಖಂಡ ಕುಬೇರಪ್ಪ, ನಿನ್ನೆ ನಡೆದ ಪ್ರತಿಭಟನೆಯಲ್ಲಿ ಇಸ್ಲಾಂ ಧರ್ಮ ಮತ್ತು ಮುಸ್ಲಿಮರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈ ಮೂಲಕ ಶಾಂತಿ ಕಡದಲು ಪ್ರಯತ್ನಿಸಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಬೇಕು ಎಂದು ಸುನ್ನಿ ಮುಸ್ಲಿಮ್ ಜಮಾಅತ್ ಕಮಿಟಿ ಒತ್ತಾಯಿಸಿದೆ.

ನಿನ್ನೆ ತಾಲೂಕು ಆಡಳಿತದ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಕುಬೇರಪ್ಪ, ಅಲ್ಪಸಂಖ್ಯಾತ ಮುಸ್ಲಿಮರ ವಿರುದ್ಧ ಅವಹೇಳನ ಮತ್ತು ಉದ್ರೇಕಕಾರಿಯಾಗಿ ಮಾತನಾಡಿದ್ದರು. ಈ ವೇಳೆ ಸ್ಥಳೀಯ ಶಾಸಕರಾದ ಶಿವಲಿಂಗೆಗೌಡರ ವಿರುದ್ಧವೂ ಅವಹೇಳನಕಾರಿಯಾಗಿ ಮಾತನಾಡಿದ್ದರು. ಮಾತ್ರವಲ್ಲ ಅರಸೀಕೆರೆ ತಹಸೀಲ್ದಾರ್ ಸಂತೋಷ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಪ್ರತಿಭಟನಾದುದ್ದಕ್ಕೂ ಮುಸ್ಲಿಮರ ವಿರುದ್ಧ ನಾಲಗೆಯನ್ನು ಹರಿಯಬಿಟ್ಟವಿ.ಎಚ್.ಪಿ ಮುಖಂಡ ಮಹಿಪಾಲ್ 2002 ರ ಗುಜರಾತ್ ಗಲಭೆಯಲ್ಲಿ ಸಂಘಪರಿವಾರ ನಡೆಸಿದ ವಂಶಹತ್ಯೆ ನೆನಪಿದೆಯೇ ಎಂದು ಕೇಳಿದ್ದರು.

ಇದು ಟ್ರಯಲ್ ಮಾತ್ರ, ಇನ್ನು ಮುಂದಿನ ಎರಡು ತಿಂಗಳಲ್ಲಿ ಒರಿಜಿನಲ್ ಫಿಲಂ ಬರಲಿದೆ ಎಂದು ಧ್ವೇಷ ಭಾಷಣ ಮಾಡಿದ್ದರು.

Join Whatsapp
Exit mobile version