ಬಂಟ್ವಾಳ: ತುಂಬೆ ಕಡೆಗೋಳಿಯ ನಿರತ ಸಾಹಿತ್ಯ ಸಂಪದ ರಜತ ಸಂಭ್ರಮ ಹಿನ್ನೆಲೆಯಲ್ಲಿ ಬಿ .ಸಿ.ರೋಡಿನ ಕೈಕುಂಜೆ ಕನ್ನಡ ಭವನದಲ್ಲಿ ಭಾನುವಾರ ನಡೆದ ಬೆಳ್ಳಿಹೆಜ್ಜೆ ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಪ್ರೊ.ಚಂದ್ರಕಲಾ ನಂದಾವರ ಅವರಿಗೆ ನಿರತ ಪ್ರಶಸ್ತಿ-2022ನ್ನು ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ. ಚಂದ್ರಕಲಾ ಅವರು, ಸಾಹಿತ್ಯ ಕ್ಷೇತ್ರದ ಸಂಘಟನೆಗೆ ಹೆಚ್ಚಿನ ಮಹತ್ವ ನೀಡುವ ಮೂಲಕ ಸಂಘಟನೆಯನ್ನು ಬಲಪಡಿಸಿರುವ ತೃಪ್ತಿ ಹೊಂದಿದ್ದೇನೆ. ಓದುಗನ ಓದಿನಿಂದಾಗಿ ಕವಿತೆಗಳು ಉತ್ತಮವಾಗಿ ಮೂಡಿಬರುವುದರಿಂದ ಕವಿತೆಯ ಓದುವಿಕೆ ಕೂಡ ಮುಖ್ಯವಾಗಿದೆ, ನಿನಗೆ ನೀನೇ ಬಂಧು, ನಿನಗೆ ನೀನೇ ಶತ್ರು ಎಂಬುದನ್ನು ಅರಿಯಬೇಕು ಎಂದು ಹೇಳಿದರು.
ನಿವೃತ್ತ ಪ್ರಿನ್ಸಿಪಾಲ್ ಡಾ. ಎನ್.ಇಸ್ಮಾಯಿಲ್ ಸಮಾರೋಪ ಭಾಷಣ ಮಾಡಿದರು. ಈ ಸಂದರ್ಭ ಬಂಟ್ವಾಳ ತಾಲೂಕು ಕಸಾಪ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ, ರಂಗಕರ್ಮಿ ಸದಾಶಿವ ಡಿ.ತುಂಬೆ ಅತಿಥಿಗಳಾಗಿ ಭಾಗವಹಿಸಿದ್ದರು. ನಿರತ ಸಾಹಿತ್ಯ ಸಂಪದದ ಗೌರವಾಧ್ಯಕ್ಷ ವಿ ಸುಬ್ರಹ್ಮಣ್ಯ ಭಟ್ ಆಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮಕ್ಕೆ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಮ ಪೂಜಾರಿ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು ಇಪ್ಪತ್ತೈದರ ಯೌವನದ ಹಂತದಲ್ಲಿರುವ ಸಂಸ್ಥೆ ಅಭಿವೃದ್ಧಿಯಾಗಲು ಸದಸ್ಯರ ಶ್ರಮ ಕಾರಣ ಎಂದು ಶುಭ ಹಾರೈಸಿದರು.
ತುಂಬೆ ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ.ಕೆ.ಎನ್.ಗಂಗಾಧರ ಆಳ್ವ ಅನಿಯತಕಾಲಿಕ ಸಂಚಿಕೆ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಬಿ. ಮುಹಮ್ಮದ್ ತುಂಬೆ, ತುಂಬೆ ಗ್ರಾಪಂ ಅಧ್ಯಕ್ಷ ಪ್ರವೀಣ್ ಬಿ ತುಂಬೆ, ನಿರತ ಸಂಪದ ಅಧ್ಯಕ್ಷ ಬೃಜೇಶ್ ಅಂಚನ್, ಪದಾಧಿಕಾರಿಗಳಾದ ದಿನೇಶ್ ಎನ್. ತುಂಬೆ, ಸುಧಾ ನಾಗೇಶ್, ಅಬ್ದುಲ್ ರಹಿಮಾನ್ ಡಿ.ಬಿ, ಪ್ರೊ.ಎಂ.ಡಿ.ಮಂಚಿ, ಗೀತಾ ಎಸ್.ಕೊಂಕೋಡಿ, ವಿನೋದ್ ಪುದು, ಕರುಣಾಕರ ಮಾರಿಪಳ್ಳ, ಅಬ್ದುಲ್ ಮಜೀದ್ ಎಸ್, ಅಶೋಕ್ ತುಂಬೆ, ಜಯರಾಮ ಪಡ್ರೆ, ತಾರಾನಾಥ ಕೈರಂಗಳ ಉಪಸ್ಥಿತರಿದ್ದರು.