Home ಟಾಪ್ ಸುದ್ದಿಗಳು ಇಸ್ರೋ ನೂತನ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ನಾರಾಯಣನ್‌ ಅಧಿಕಾರ ಸ್ವೀಕಾರ

ಇಸ್ರೋ ನೂತನ ಅಧ್ಯಕ್ಷರಾಗಿ ಹಿರಿಯ ವಿಜ್ಞಾನಿ ನಾರಾಯಣನ್‌ ಅಧಿಕಾರ ಸ್ವೀಕಾರ

ಬೆಂಗಳೂರು: ಹಿರಿಯ ವಿಜ್ಞಾನಿ ವಿ.ನಾರಾಯಣನ್‌ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ನೂತನ ಅಧ್ಯಕ್ಷರಾಗಿ ಮತ್ತು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿರುವುದಾಗಿ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಇಸ್ರೋ ಬಿಡುಗಡೆ ಮಾಡಿರುವ ಪ್ರಕಟನೆಯಲ್ಲಿ, ಡಾ.ವಿ.ನಾರಾಯಣನ್‌ ಅವರು ಜನವರಿ 13ರ ಸಂಜೆ ಇಸ್ರೋ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷರಾಗಿ ಹಾಗೂ ಬಾಹ್ಯಾಕಾಶ ಕಮಿಷನ್‌ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವುದಾಗಿ ತಿಳಿಸಿದೆ.‌ ಹಿರಿಯ ವಿಜ್ಞಾನಿ ಎಸ್.ಸೋಮನಾಥ್‌ ಅವರಿಂದ ತೆರವುಗೊಂಡಿದ್ದ ಸ್ಥಾನಕ್ಕೆ ನಾರಾಯಣನ್‌ ಅವರನ್ನು ನೇಮಕ ಮಾಡಲಾಗಿದೆ.

ಹಿರಿಯ ವಿಜ್ಞಾನಿ ಡಾ.ನಾರಾಯಣನ್‌ ಅವರು ಇಸ್ರೋದ ಲಿಕ್ವಿಡ್‌ ಪ್ರೊಪಲ್ಶನ್‌ ಸಿಸ್ಟಮ್ಸ್‌ ಸೆಂಟರ್‌ (LPSC) ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ನಾರಾಯಣನ್‌ ಅವರು ಸ್ಪೇಸ್‌ ಕ್ರಾಫ್ಟ್‌ ಮತ್ತು ಲಾಂಚ್‌ ವೆಹಿಕಲ್ಸ್‌ ನ ಪ್ರೊಪಲ್ಶನ್‌ ಸಿಸ್ಟಮ್ಸ್‌ ಅಭಿವೃದ್ದಿಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

Join Whatsapp
Exit mobile version