Home ಟಾಪ್ ಸುದ್ದಿಗಳು ಕನ್ನಡ ಖ್ಯಾತ ನಟ ಮೋಹನ್ ಜುನೇಜ ಇನ್ನಿಲ್ಲ

ಕನ್ನಡ ಖ್ಯಾತ ನಟ ಮೋಹನ್ ಜುನೇಜ ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಮೋಹನ್ ಜುನೇಜ (54) ಅವರು ನಿಧನರಾಗಿದ್ದಾರೆ.

ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಮೋಹನ್ ಇಂದು ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಮೃತಪಟ್ಟಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚೆಲ್ಲಾಟ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ ಮೋಹನ್ ಜುನೇಜ ಧಾರವಾಹಿ ಹಾಗೂ ಸಿನಿಮಾ ಸೇರಿ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಕೆಜಿಎಫ್ ಚಾಪ್ಟರ್ 1 ಮತ್ತು ಕೆಜಿಎಫ್ ಚಾಪ್ಟರ್-2 ಸಿನಿಮಾದಲ್ಲೂ ನಟಿಸುವ ಮೂಲಕ ಜನಮನ ಗೆದ್ದಿದ್ದರು.

ನಟನ ಅಗಲಿಕೆಗೆ ಆಪ್ತರು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

Join Whatsapp
Exit mobile version