Home ಟಾಪ್ ಸುದ್ದಿಗಳು ಹಿರಿಯ ಪತ್ರಕರ್ತ, ಸಾಹಿತಿ ಎಂ.ಎಸ್. ಪ್ರಭಾಕರ ನಿಧನ

ಹಿರಿಯ ಪತ್ರಕರ್ತ, ಸಾಹಿತಿ ಎಂ.ಎಸ್. ಪ್ರಭಾಕರ ನಿಧನ

ಕೋಲಾರ: ಹಿರಿಯ ಪತ್ರಕರ್ತ, ಕಾಮರೂಪಿ ಎಂದೇ ಪ್ರಸಿದ್ಧರಾಗಿದ್ದ ಸಾಹಿತಿ, ಎಂ.ಎಸ್. ಪ್ರಭಾಕರ (87) ವಯೋಸಹಜ ಕಾರಣ ಗುರುವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಕೋಲಾರದ ಕಠಾರಿಪಾಳ್ಯ ನಿವಾಸಿ ಆಗಿದ್ದ ಇವರು ಅವಿವಾಹಿತರಾಗಿದ್ದರು. ದೇಹವನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾನ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಶಿಕ್ಷಕರಾಗಿದ್ದ ತಂದೆ .ಎಸ್. ಸೂರಪ್ಪ ಹಾಗೂ ತಾಯಿ ಸುಬ್ಬಮ್ಮ ಅವರ 11 ಮಕ್ಕಳಲ್ಲಿ ಇವರು ಕೊನೆಯವರಾಗಿದ್ದಾರೆ.

ದೇಶದ ವಿವಿಧ ರಾಜ್ಯಗಳಲ್ಲಿ ‘ದಿ. ಹಿಂದೂ’ ಪತ್ರಿಕೆಯಲ್ಲಿ ಕೆಲಸ ಮಾಡಿರುವ ಇವರು ದಕ್ಷಿಣ ಆಫ್ರಿಕದಲ್ಲೂ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದು,  ಅಲ್ಲಿನ ಸ್ವಾತಂತ್ರ್ಯ ಹೋರಾಟಗಾರ ನೆಲ್ಸನ್ ಮಂಡೇಲಾ ಅವರ ಸಂದರ್ಶನ ನಡೆಸಿದ ಭಾರತದ ಮೊದಲ ಪತ್ರಕರ್ತರಾಗಿದ್ದರು.

Join Whatsapp
Exit mobile version