ಅನುಮಾನಾಸ್ಪದ ವಾಹನಗಳ ತಪಾಸಣೆ; ಬಿಗ್ ಆಕ್ಷನ್

Prasthutha|

ಶಿವಮೊಗ್ಗ: ವಿಶೇಷ ಕಾರ್ಯಾಚರಣೆ ಕೈಗೊಂಡ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡ, ನಗರದಲ್ಲಿ 50 ಚೆಕ್ ಪೋಸ್ಟ್ ತೆರೆದು ಅನುಮಾನಾಸ್ಪದವಾಗಿ ಓಡಾಡುವ ವಾಹನ ಮತ್ತು ವ್ಯಕ್ತಿಗಳ ತಪಾಸಣೆ ನಡೆಸಿದ್ದಾರೆ.

- Advertisement -

ನಗರದ ವೈನ್ ಶಾಪ್ ಸುತ್ತ ಹಾಗೂ ನಿರ್ಜನ ಪ್ರದೇಶ ಗಳಲ್ಲಿ ಕುಡಿದು ಜನರಿಗೆ ತೊಂದರೆ ಕೊಡುವವರ ವಿರುದ್ದ ವಿಶೇಷ ಕಾರ್ಯಾಚರಣೆ ಕೈಗೊಂಡು, 11 ಅಬಕಾರಿ ಪ್ರಕರಣಗಳು, 350 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು, 93 ಲಘು ಪ್ರಕರಣಗಳು, 96 ತಂಬಾಕು ಪ್ರಕರಣಗಳು , 10 ಗಾಂಜಾ ಸೇವನೆ ಪ್ರಕರಣಗಳನ್ನು ದಾಖಲಿಸಿ 1 ತಲ್ವಾರ್, 4 ಹರಿತ ವಾದ ಡ್ಯಾಗರ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆಯು ನಿರಂತರವಾಗಿ ನಡೆಯುತ್ತಿದ್ದು, ಇಂದು ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿ ಸಿಬ್ಬಂದಿಗಳನ್ನು ನಿಯೋಜಿಸಿ ಒಂದು ಗಂಟೆಗಳ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಉನ್ನತ ಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp
Exit mobile version