Home ಟಾಪ್ ಸುದ್ದಿಗಳು ಹಲವು ಹೈಡ್ರಾಮಾಗಳ ಬಳಿಕ ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ಬಿಜೆಪಿಗೆ, ಉಪಾಧ್ಯಕ್ಷೆ ಸ್ಥಾನ ಕಾಂಗ್ರೆಸ್...

ಹಲವು ಹೈಡ್ರಾಮಾಗಳ ಬಳಿಕ ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ಬಿಜೆಪಿಗೆ, ಉಪಾಧ್ಯಕ್ಷೆ ಸ್ಥಾನ ಕಾಂಗ್ರೆಸ್ ಗೆ

ವಿಟ್ಲ : ಸಾಕಷ್ಟು ಹೈಡ್ರಾಮಾಗಳಿಗೆ ಸಾಕ್ಷಿಯಾಗಿದ್ದ ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷೆ ಚುನಾವಣೆ ಇಂದು ನಡೆದಿದ್ದು, ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ವಿಜಯಿಗಳಾಗಿದ್ದಾರೆ.

ವೀರಕಂಭ ಗ್ರಾಮ ಪಂಚಾಯತಿಯಲ್ಲಿದ್ದ 14 ಸ್ಥಾನಗಳಲ್ಲಿ ಏಳು ಬಿಜೆಪಿ, ಏಳು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದು ಸಮಬಲ ಸಾಧಿಸಿದ್ದರು. ಇದೀಗ ನಡೆದಿರುವ ಪಂಚಾಯತ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ದಿನೇಶ್ 8 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಘು ಪೂಜಾರಿ ಆರು ಮತ ಪಡೆದು ಸೋತರು.

ಉಪಾಧ್ಯಕ್ಷ ಸ್ಥಾನಕ್ಕೆ ಸಮಬಲ ಬಂದಿದ್ದು, ಟಾಸ್ ಮೂಲಕ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶೀಲಾ ವೇಗಸ್ ಆಯ್ಕೆಯಾಗಿದ್ದಾರೆ.

ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯೊಬ್ಬರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದರು. ಅದೇ ದಿನ ಸಂಜೆ, ಅದೇ ಅಭ್ಯರ್ಥಿ ಮತ್ತೆ ರಮಾನಾಥ ರೈ ಸಮ್ಮುಖದಲ್ಲಿ ಮತ್ತೆ ಕಾಂಗ್ರೆಸ್ ಗೆ ಸೇರಿ ಸುದ್ದಿಯಾಗಿದ್ದರು. ಕೊನೆಗೂ ವೀರಕಂಭ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷೆ ಸ್ಥಾನಗಳನ್ನು ಎರಡೂ ಪಕ್ಷಗಳ ಬೆಂಬಲಿತರು ಪಡೆದಿದ್ದಾರೆ.

Join Whatsapp
Exit mobile version