ಪಿಲಿಭಿತ್: ಸಂಸದ ವರುಣ್ ಗಾಂಧಿಗೆ ಈ ಬಾರಿ ಬಿಜೆಪಿ ಟಿಕೆಟ್ ಕೈತಪ್ಪಬಹುದು ಎಂಬ ಊಹಾಪೋಹಗಳ ನಡುವೆ, ವರುಣ್ ಗಾಂಧಿ ಪಿಲಿಭಿತ್ ಕ್ಷೇತ್ರದಿಂದ ಮತ್ತೆ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂದು ಅವರ ಆಪ್ತ ಸಹಾಯಕ ಹೇಳಿದ್ದಾರೆ.
ಹಲವು ಸಂದರ್ಭಗಳಲ್ಲಿ ನರೇಂದ್ರ ಮೋದಿ ಸರಕಾರವನ್ನು ಟೀಕಿಸಿದ್ದ ವರುಣ್ ಗಾಂಧಿ ಲೋಕಸಭೆ ಚುನಾವಣೆಗೆ ಮತ್ತೆ ಬಿಹೆಪಿ ಅಭ್ಯರ್ಥಿಯಾಗಿಯೇ ಸ್ಪರ್ದಿಸುತ್ತಿದ್ದು, ಅದರ ತಯಾರಿ ನಡೆಸಿದ್ದಾರೆ ಎಂದು ಆಪ್ತ ಸಹಾಯಕ ಎಂ.ಆರ್. ಮಲಿಕ್ ಗಾಂಧಿ ತಿಳಿಸಿದ್ದಾರೆ.
ವರುಣ್ ಗಾಂಧಿ ಪಕ್ಷ ಬದಲಾಯಿಸಬಹುದು ಎಂಬ ಊಹಾಪೋಹಗಳನ್ನು ಅಲ್ಲಗೆಳೆದ ಮಲಿಕ್, ವರುಣ್ ಗಾಂಧಿ ಉತ್ತರ ಪ್ರದೇಶದ ಪಿಲಿಭಿತ್ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂದರು.
ಪಿಲಿಭಿತ್ ಕ್ಷೇತ್ರವನ್ನು ವರುಣ್ ಗಾಂಧಿಯ ತಾಯಿ ಮೇನಕಾ ಗಾಂಧಿ ಮತ್ತು ವರುಣ್ ಎರಡು ದಶಕಗಳಿಂದ ಪ್ರತಿನಿಧಿಸುತ್ತಿದ್ದಾರೆ.
ವರುಣ್ ಕಳೆದ ಕೆಲವು ವರ್ಷಗಳಿಂದ ತಮ್ಮದೇ ಪಕ್ಷದ ಸರಕಾರದ ನೀತಿಗಳ ಮೇಲೆ ವಾಗ್ದಾಳಿ ನಡೆಸುತ್ತಿದ್ದರು.ಆದರೆ ಇತ್ತೀಚೆಗೆ ಅವರು ಬಿಜೆಪಿ ನಾಯಕರೊಂದಿಗೆ ವೇದಿಕೆ ಹಂಚಿಕೊಂಡಿದ್ದರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದರು.