Home ಕರಾವಳಿ ಕೇರಳದಲ್ಲಿ ವಿವಿಧ ಸೋಂಕು ಪತ್ತೆ ಹಿನ್ನಲೆ| ರಾಜ್ಯ ಗಡಿ ಭಾಗಗಳಲ್ಲಿ ಬಿಗಿ ಭದ್ರತೆ

ಕೇರಳದಲ್ಲಿ ವಿವಿಧ ಸೋಂಕು ಪತ್ತೆ ಹಿನ್ನಲೆ| ರಾಜ್ಯ ಗಡಿ ಭಾಗಗಳಲ್ಲಿ ಬಿಗಿ ಭದ್ರತೆ

ಮಂಗಳೂರು: ಕೇರಳದಲ್ಲಿ ವಿವಿಧ ಸೋಂಕು ಪತ್ತೆ ಹಿನ್ನೆಲೆ ದ.ಕ ಜಿಲ್ಲೆಯ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಗಡಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಮಂಗಳೂರು ಡಿಸಿಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

 ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಅವರು ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚುವರಿ ಐದು ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದ್ದು, ಒಟ್ಟಾರೆ 16 ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಪ್ರತೀ ಚೆಕ್ ಪೋಸ್ಟ್ ನಲ್ಲಿ ಐದು ಮಂದಿಯಂತೆ ಪೊಲೀಸ್ ಸಿಬ್ಬಂದಿ ನಿಯೋಜನೆ ಇದ್ದು, ಇವರ ಜೊತೆಗೆ ಆರೋಗ್ಯ ಇಲಾಖೆಯಿಂದ ಅಧಿಕಾರಿಗಳನ್ನು ನಿಯೋಜಿಸುವಂತೆ ಇಲಾಖೆಗೆ ಮನವಿ ಮಾಡಲಾಗಿದೆ.

https://www.youtube.com/watch?v=f37cFtb6yNk

ಕೇರಳದಿಂದ ಜಿಲ್ಲೆಗೆ ಬರುವವರಿಗೆ ಆರ್ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದ್ದು, ನಿತ್ಯ ಪ್ರಯಾಣಿಕರು ಪ್ರತೀ 14 ದಿನಗಳಿಗೆ ಟೆಸ್ಟ್ ಮಾಡಲು ಸೂಚನೆ ನೀಡಲಾಗಿದೆ. ಇತರ ಪ್ರಯಾಣಿಕರಿಗೆ 28 ಗಂಟೆಗಳ ಆರ್ಟಿಪಿಸಿಆರ್ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಇದಲ್ಲದೆ ನಗರದ ಎರಡು ರೈಲ್ವೆ ನಿಲ್ದಾಣದಲ್ಲೂ ತಪಾಸಣೆ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಹೇಳಿದರು.

Join Whatsapp
Exit mobile version