Home ಟಾಪ್ ಸುದ್ದಿಗಳು ಮಾಂಸಾಹಾರ ಸರ್ವ್‌ ಮಾಡಿದಕ್ಕೆ ವಂದೇ ಭಾರತ್ ಸಿಬ್ಬಂದಿಗೆ ಕಪಾಳಮೋಕ್ಷ..!

ಮಾಂಸಾಹಾರ ಸರ್ವ್‌ ಮಾಡಿದಕ್ಕೆ ವಂದೇ ಭಾರತ್ ಸಿಬ್ಬಂದಿಗೆ ಕಪಾಳಮೋಕ್ಷ..!

ನವದೆಹಲಿ: ಮಾಂಸಾಹಾರ ಸರ್ವ್‌ ಮಾಡಿದಕ್ಕೆ ವೃದ್ಧ ಪ್ರಯಾಣಿಕರೊಬ್ಬರು ವಂದೇ ಭಾರತ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿರುವ ಘಟನೆ ವರದಿಯಾಗಿದೆ.

 ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ವಿಡಿಯೋ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಈ ಘಟನೆ ಜುಲೈ 26 ರಂದು ಹೌರಾದಿಂದ ರಾಂಚಿಗೆ ಪ್ರಯಾಣಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ಸಂಭವಿಸಿದೆ.

ವಂದೇ ಭಾರತ್ ರೈಲಿನಲ್ಲಿ ಸಸ್ಯಹಾರಿಯಾದ ಪ್ರಯಾಣಿಕರೊಬ್ಬರು ಲೇಬಲ್​​ ಗಮನಿಸದೆ ಆಕಸ್ಮಿಕವಾಗಿ ಮಾಂಸಹಾರ ಸೇವಿಸಿದ್ದಾರೆ. ಎರಡು ತುತ್ತು ತಿಂದ ಬಳಿಕ ಮಾಂಸಾಹಾರ ಎಂದು ತಿಳಿದು ಕೋಪಗೊಂಡ ವ್ಯಕ್ತಿ ಮಾಂಸಾಹಾರ ಸರ್ವ್‌ ಮಾಡಿದ ವಂದೇ ಭಾರತ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದಾರೆ.

Join Whatsapp
Exit mobile version