ವಾಲ್ಮೀಕಿ ‘ದಾರಿಗಳ್ಳನಾಗಿದ್ದ’ ಎಂದ ಚಕ್ರತೀರ್ಥನ ಪಠ್ಯ ಪರಿಷ್ಕರಣೆ ಸಮಿತಿ !

Prasthutha|

►► ಪಠ್ಯ ಹಿಂಪಡೆಯುವಂತೆ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಪತ್ರ

- Advertisement -

ಬೆಂಗಳೂರು: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣೆ ಸಮಿತಿಯ ಯಡವಟ್ಟು  ಪ್ರಕ್ರಿಯೆಯಲ್ಲಿ ವಾಲ್ಮೀಕಿ ಮಹರ್ಶಿ ಅವರನ್ನು ‘ದಾರಿಗಳ್ಳನಾಗಿದ್ದ’ ಎಂದು ಅಪಮಾನ ಮಾಡಲಾಗಿದೆ. ಹಾಗಾಗಿ ಪರಿಷ್ಕೃತ ಪಠ್ಯವನ್ನು ಹಿಂಪಡೆಯಬೇಕು. ಎಂದು ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಸುರಪುರ ದೊರೆಗಳು ಮತ್ತು ಆದಿವಾಸಿ ಸಮುದಾಯದ ಪರಂಪರೆಯನ್ನು ಅಪಮೌಲ್ಯಗೊಳಿಸಿರುವ ಪರಿಷ್ಕೃತ ಶಾಲಾ ಪಠ್ಯಗಳನ್ನು ವಾಪಸು ಪಡೆಯಬೇಕು. ಇದಕ್ಕೆ ಕಾರಣರಾದ ವ್ಯಕ್ತಿಯು ಕ್ಷಮೆ ಕೇಳಬೇಕು ಎಂದು ಪ್ರಸನ್ನಾನಂದ ಸ್ವಾಮೀಜಿ ಒತ್ತಾಯಿಸಿದ್ದಾರೆ. ಹತ್ತನೇಯ ತರಗತಿಯ `ವೀರಲವ’ ಎಂಬ ಪಾಠದಲ್ಲಿ ಮಹಾಕವಿ ಶ್ರೀ ವಾಲ್ಮೀಕಿ ಕುರಿತು  `ಯೌವನಾವಸ್ಥೆಯಲ್ಲಿ ಬೇಡರ ಸಂಗಡ ಸೇರಿ ದಾರಿಗಳ್ಳನಾಗಿದ್ದ’ ಎಂದು ನಮೂದಿಸಲಾಗಿದೆ. ದೇಶದ ಮೂಲನಿವಾಸಿ ಬುಡಕಟ್ಟು ಸಮುದಾಯವಾಗಿರುವ ಬೇಡ ಸಮುದಾಯವನ್ನು `ಕಳ್ಳರಾಗಿದ್ದರು’ ಎಂಬಂತೆ ಬಿಂಬಿಸುವ ಮೂಲಕ ಇಡೀ ಬೇಡ, ವಾಲ್ಮೀಕಿ ಸಮುದಾಯಕ್ಕೆ ಅವಮಾನ ಮಾಡಲಾಗಿದೆ. ವಾಲ್ಮೀಕಿ ಸಮುದಾಯದ ಭಾವನೆಯನ್ನು ಕೆಣಕಲಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

- Advertisement -

10ನೇ ತರಗತಿಯ ಕನ್ನಡ ಪಠ್ಯದಲ್ಲಿ ‘ಸ್ವಾಮಿ ವಿವೇಕಾನಂದ ಅವರ ಚಿಂತನೆಗಳು’ ಎಂಬ ಶೀರ್ಷಿಕೆಯಡಿ ‘ಸಂಸ್ಕೃತಿಯು ರಕ್ತದಲ್ಲಿ ಹರಿಯಬೇಕು. ಆದರೆ ಅದರಿಂದ ಏನು ಪ್ರಯೋಜನ? ಅವರು ಕಾಡುಜನರಂತೆ ಇರುವವರು. ಅವರಲ್ಲಿ ಸಂಸ್ಕೃತಿ ಇಲ್ಲ’ ಎಂದು ಬರೆಯಲಾಗಿದೆ.  ಕಾಡಿನ ಮಾಲಿಕರಂತಿದ್ದ ಆದಿವಾಸಿಗಳು ತಮ್ಮದೇ ಶ್ರೀಮಂತ ಸಂಸ್ಕೃತಿ ವಾರಸುದಾರರು. ಈ ಆದಿವಾಸಿ ಬುಡಕಟ್ಟು ಸಮುದಾಯಗಳಿಗೆ ‘ಸಂಸ್ಕೃತಿ ಇಲ್ಲ’ ಎಂದು ಅಪಮಾನ ಮಾಡಿರುವುದು ಸಮರ್ಥನೀಯವಲ್ಲ. ನಮ್ಮ ಬುಡಕಟ್ಟು ಸಮುದಾಯಗಳನ್ನು ಅನಾಗರಿಕರೆಂದು ಬಿಂಬಿಸುವ ಈ ಪಠ್ಯ ಒಪ್ಪಿತವಲ್ಲ ಎಂದಿದ್ದಾರೆ.



Join Whatsapp