Home ಟಾಪ್ ಸುದ್ದಿಗಳು ರಾಮಮಂದಿರಕ್ಕೂ ಮೊದಲು ವಾಲ್ಮೀಕಿ ಮಂದಿರ ಕಟ್ಟಬೇಕಿತ್ತು: ಕೆಎನ್ ರಾಜಣ್ಣ

ರಾಮಮಂದಿರಕ್ಕೂ ಮೊದಲು ವಾಲ್ಮೀಕಿ ಮಂದಿರ ಕಟ್ಟಬೇಕಿತ್ತು: ಕೆಎನ್ ರಾಜಣ್ಣ

ದಾವಣಗೆರೆ: ಶ್ರೀರಾಮನ ಬಗ್ಗೆ ಜಗತ್ತಿಗೆ ತಿಳಿಸಿದ್ದೇ ವಾಲ್ಮೀಕಿ. ಹೀಗಾಗಿ ರಾಮಮಂದಿರಕ್ಕೂ ಮೊದಲು ವಾಲ್ಮೀಕಿ ಮಂದಿರ ಕಟ್ಟಬೇಕಿತ್ತು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.


ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರೆಯಲ್ಲಿ ಮಾತನಾಡಿ ಅವರು, ವಾಲ್ಮೀಕಿ ಸಮುದಾಯದ ಮೂವರಿಗೆ ಸಚಿವ ಸ್ಥಾನ ನೀಡಿದ್ದಾರೆ. ರಾಜ್ಯದಲ್ಲಿ 100 ದೇವಸ್ಥಾನಗಳ ಜೀರ್ಣೋದ್ಧಾರ ಮಾಡಲಾಗುತ್ತಿದೆ ಎಂದು ತಿಳಿಸಿದರು.


ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿ, ಶ್ರೀರಾಮನ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ನಾವು ಕೂಡ ರಾಮ ಭಕ್ತರೇ. ಆದರೆ ರಹೀಮನನ್ನೂ ಅಷ್ಟೇ ಪ್ರೀತಿಯಿಂದ ನೋಡುತ್ತೇವೆ. ರಾಮನ ಹೆಸರಲ್ಲಿ ರಾಜಕೀಯ ಮಾಡುವುದನ್ನ ಬಿಡಬೇಕು ವಾಗ್ದಾಳಿ ಮಾಡಿದ್ದಾರೆ.

Join Whatsapp
Exit mobile version