ವಳಚ್ಚಿಲ್: ಶ್ರೀನಿವಾಸ್ ಕಾಲೇಜ್ ವಿದ್ಯಾರ್ಥಿಗಳಿಂದ ಇಫ್ತಾರ್ ಮೀಟ್

Prasthutha|

ಫರಂಗಿಪೇಟೆ: ಶ್ರೀನಿವಾಸ್ ಕಾಲೇಜ್ ವಿದ್ಯಾರ್ಥಿಗಳಾದ ಸಿಟ್ ಬ್ರದರ್ಸ್ ವತಿಯಿಂದ ವಳಚ್ಚಿಲ್ ಅಲ್ ಬದ್ರಿಯಾ ಜುಮ್ಮಾ ಮಸೀದಿ ವಠಾರದಲ್ಲಿ ಇಫ್ತಾರ್ ಮೀಟ್ ಕಾರ್ಯಕ್ರಮ ಮಂಗಳವಾರ ನಡೆಯಿತು

- Advertisement -

ದುವಾಗೈದು ಮಾತನಾಡಿದ ಮಸೀದಿ ಖತೀಬ್ ದಾವೂದ್ ಇಸ್ಮಾಯಿಲ್ ಫೈಝಿ, ಜಾಗತಿಕ ಮುಸ್ಲಿಮರು ರಮಝಾನ್ ತಿಂಗಳಲ್ಲಿ ಉಪವಾಸ ವ್ರತದಲ್ಲಿ ಇದ್ದು ಇತರರ ಸಂಕಷ್ಟಗಳಿಗೆ ನೆರವಾಗುತ್ತಾ ಸಮಾಜಮುಖಿ ಕಾರ್ಯಗಳಲ್ಲಿ ಗರಿಷ್ಠವಾಗಿ ತೊಡಗಿಸಿಕೊಳ್ಳುತ್ತಾ ಇದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಒಟ್ಟು ಸೇರಿ ಈ ಬೃಹತ್ ಇಫ್ತಾರ್ ಮೀಟ್ ಆಯೋಜಿಸಿದ್ದು ಶ್ಲಾಘನೀಯ ಎಂದರು.

ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಮಾತನಾಡಿ, ಕೇರಳದಿಂದ ಬಹುತೇಕ ವಿದ್ಯಾರ್ಥಿಗಳನ್ನು ಹೆತ್ತವರು ಮಂಗಳೂರಿನಲ್ಲಿರುವ ಕಾಲೇಜ್‌ಗೆ ಭರವಸೆಯಿಂದ ವಿದ್ಯಾರ್ಜನೆಗಾಗಿ ಕಳಿಸುತ್ತಿದ್ದಾರೆ. ಆದರೆ ಆ ವಿದ್ಯಾರ್ಥಿಗಳು ವಿವಿಧ ರೀತಿಯ ಮಾದಕ ವ್ಯಸನಕ್ಕೆ ತುತ್ತಾಗಿ ತಮ್ಮ ಅಮೂಲ್ಯವಾದ ಭವಿಷ್ಯವನ್ನು ಕಳೆಯುತ್ತಿರುವ ವಿಷಯವನ್ನು ಈ ಹಿಂದೆ ಪೊಲೀಸ್ ಆಯುಕ್ತರನ್ನು ಭೇಟಿಯಾದ ಸಂದರ್ಭದಲ್ಲಿ ಅವರು ನಮ್ಮೊಂದಿಗೆ ಪ್ರಸ್ತಾವಿಸಿದ್ದರು. ಆದ್ದರಿಂದ ಕೆಟ್ಟ ಚಟಕ್ಕೆ ಬಲಿಯಾಗಿ ತಮ್ಮ ಅಮೂಲ್ಯ ಜೀವನವನ್ನು ನಷ್ಟಪಡಿಸುವ ವಿದ್ಯಾರ್ಥಿಗಳನ್ನು ಸಭ್ಯ ವಿದ್ಯಾರ್ಥಿಗಳು ಒಟ್ಟು ಸೇರಿ ಈ ವ್ಯಸನದಿಂದ ಹೊರಗೆ ತರಲು ಪ್ರಯತ್ನಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

- Advertisement -

ಎಸ್ಕೆಎಸ್‌ಎಫ್ ಈಸ್ಟ್ ಜಿಲ್ಲಾ ಕಾರ್ಯದರ್ಶಿ ಹಾರಿಸ್ ಕೌಸರಿ, ಸಿರಾಜುದ್ದೀನ್ ಮದನಿ, ಹಮೀದ್ ಹನೀಫಿ, ಹಸೈನಾರ್ ಫೈಝಿ, ಅಡ್ಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷ ಯಾಸೀನ್ ಅರ್ಕುಳ, ಸದಸ್ಯರಾದ ಉಬೈದ್, ಶಬೀರ್, ಡೈಮಂಡ್ ಅಲ್ತಾಫ್ ಫರಂಗಿಪೇಟೆ, ಪುದು ಗ್ರಾಮ ಪಂಚಾಯತ್ ಸದಸ್ಯ ಹಾಶಿರ್ ಪೇರಿಮಾರ್, ಮಸೀದಿ ಗೌರವಾದ್ಯಕ್ಷ ಅಬ್ದುಲ್ ರಹಿಮಾನ್, ಅಧ್ಯಕ್ಷ ಮುಹಮ್ಮದ್ ಆಶ್ರಫ್, ಉಪಾಧ್ಯಕ್ಷ ಸಿದ್ದೀಕ್ ಝುಬೈರ್, ಕಾರ್ಯದರ್ಶಿ ನಝೀರ್, ಕೋಶಾಧಿಕಾರಿ ಮೊಹಮ್ಮದ್ ಅಲಿ, ವಿದ್ಯಾರ್ಥಿಗಳಾದ ಝಿಯಾದ್ ನೆಲ್ಯಾಡಿ, ಅನ್ವರ್ ಬನ್ನೂರು, ತನ್ವೀರ್, ರಿಫಾಝ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು



Join Whatsapp