Home ಟಾಪ್ ಸುದ್ದಿಗಳು ವಿಶ್ವಸಂಸ್ಥೆಯ ವಿಶ್ವ ಪಾರಂಪರಿಕ ತಾಣ| ಭಾರತದ ಮೂರು ಸಾಂಸ್ಕೃತಿಕ ಸ್ಥಳಗಳ ಸೇರ್ಪಡೆ

ವಿಶ್ವಸಂಸ್ಥೆಯ ವಿಶ್ವ ಪಾರಂಪರಿಕ ತಾಣ| ಭಾರತದ ಮೂರು ಸಾಂಸ್ಕೃತಿಕ ಸ್ಥಳಗಳ ಸೇರ್ಪಡೆ

ಹೊಸದಿಲ್ಲಿ: ವಿಶ್ವಸಂಸ್ಥೆಯ ವಿಶ್ವ ಪಾರಂಪರಿಕ ತಾಣದ ತಾತ್ಕಾಲಿಕ ಪಟ್ಟಿಗೆ ಭಾರತದ ಮೂರು ಸಾಂಸ್ಕೃತಿಕ ಸ್ಥಳಗಳನ್ನು ಸೇರಿಸಿರುವುದಾಗಿ ಭಾರತದ ಪುರಾತತ್ವ ಇಲಾಖೆ ಹೇಳಿದೆ.

ಮೊಡೆರಾದ ಸೂರ್ಯ ದೇಗುಲ, ಗುಜರಾತ್ನ ಐತಿಹಾಸಿಕ ವಾದನಗರ ಹಾಗೂ ತ್ರಿಪುರಾದ ಉನಕೋಟಿಯ ರಾಕ್ ಕಟ್ ಶಿಲ್ಪಗಳನ್ನು ವಿಶ್ವ ಪಾರಂಪರಿಕ ತಾಣದ ತಾತ್ಕಾಲಿಕ ಪಟ್ಟಿಗೆ ಸೇರಿಸಲಾಗಿದೆ.

ಈ ಕುರಿತು ಕೇಂದ್ರ ಸಂಸ್ಕೃತಿ ಖಾತೆ ಸಚಿವ ಜಿ. ಕಿಶನ್ ರೆಡ್ಡಿ ದೇಶಕ್ಕೆ ಶುಭಾಶಯ ಕೋರಿ ಟ್ಟಿಟ್ ಮಾಡಿದ್ದಾರೆ. ಈ ಟ್ವೀಟ್ ಅನ್ನು ಹಂಚಿಕೊಂಡಿರುವ ಪುರಾತತ್ವ ಇಲಾಖೆ, ಭಾರತದ ಸಾಂಸ್ಕೃತಿಕ ಬೆಳವಣಿಗೆಗೆ ಇದು ಇನ್ನಷ್ಟು ಉತ್ತೇಜನ ಕೊಡಲಿದೆ ಎಂದು ಹೇಳಿದೆ.

Join Whatsapp
Exit mobile version