Home ಟಾಪ್ ಸುದ್ದಿಗಳು ಜೋಷಿ ವಿರುದ್ಧ ದಿಂಗಾಲೇಶ್ವರ ಶ್ರೀ ಸ್ಪರ್ಧೆಯನ್ನು ಸ್ವಾಗತಿಸಿದ ವಚನಾನಂದ ಶ್ರೀ

ಜೋಷಿ ವಿರುದ್ಧ ದಿಂಗಾಲೇಶ್ವರ ಶ್ರೀ ಸ್ಪರ್ಧೆಯನ್ನು ಸ್ವಾಗತಿಸಿದ ವಚನಾನಂದ ಶ್ರೀ

ದಾವಣಗೆರೆ: ದಿಂಗಾಲೇಶ್ವರ ಶ್ರೀ ರಾಜಕೀಯ ಶುದ್ಧೀಕರಣಕ್ಕೆ ಬಂದಿದ್ದಾರೆ.ಉತ್ತರ ಭಾರತದಂತೆ ಕರ್ನಾಟಕದಲ್ಲೂ ಮಠಾಧೀಶರು ರಾಜಕಾರಣಕ್ಕೆ ಬರಬೇಕು ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವುದನ್ನು ವಚನಾನಂದ ಶ್ರೀ ಸ್ವಾಗತಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ವಚನಾನಂದ ಶ್ರೀ, ರಾಜಕಾರಣದಲ್ಲಿ ಅಶುದ್ಧಿಯನ್ನು ಶುದ್ಧಿ ಮಾಡಲಿಕ್ಕೆ ಪರಮ ಪೂಜ್ಯರು ಬಹಳ ಯೋಗ್ಯರು ಅಂತ ನನಗೆ ಅನಿಸುತ್ತಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಆ ಭಾಗದ ಲಿಂಗಾಯತ ನಾಯಕರನ್ನು ತುಳಿಯುವಂತಹ ಕೆಲಸ ಮಾಡಿದ್ದಾರೆ. ಈ ವಿಚಾರವೂ ನಮ್ಮ ಗಮನಕ್ಕೆ ಬಂದಿದೆ. ಈ ವಿಚಾರವಾಗಿ ನಾವು ಸದ್ಯದಲ್ಲೇ ಸಭೆ ನಡೆಸಿ ನಮ್ಮ ನಿರ್ಧಾರ ತಿಳಿಸುತ್ತೇವೆ ಎಂದರು.

ಅವರ ಭಕ್ತರ ಎಲ್ಲರ ಅಭಿಪ್ರಾಯ ಕೇಳಿಕೊಂಡೇ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಚುನಾವಣೆಗೆ ಸ್ಪರ್ಧಿಸುತ್ತಿರುವುದು ಅವರ ವೈಯಕ್ತಿಕ ನಿರ್ಧಾರವಲ್ಲ ಪಂಚಮಸಾಲಿ ಸಮುದಾಯ ದಿಂಗಾಲೇಶ್ವರ ಶ್ರೀಗಳಿಗೆ ಸಂಪೂರ್ಣ ಬೆಂಬಲ ನೀಡುವ ಬಗ್ಗೆ ಸದ್ಯದಲ್ಲೇ ಅಲ್ಲೊಂದು ಸಭೆ ಮಾಡಿ ನಮ್ಮ ನಿರ್ಧಾರ ತಿಳಿಸುತ್ತೇವೆ ಎಂದರು.

Join Whatsapp
Exit mobile version