Home ಟಾಪ್ ಸುದ್ದಿಗಳು 6ರಿಂದ 12ನೇ ವರ್ಷದ ಮಕ್ಕಳಿಗೆ ಶೀಘ್ರವೇ ಲಸಿಕೆ ಅಭಿಯಾನ ಪ್ರಾರಂಭ: ಸುಧಾಕರ್

6ರಿಂದ 12ನೇ ವರ್ಷದ ಮಕ್ಕಳಿಗೆ ಶೀಘ್ರವೇ ಲಸಿಕೆ ಅಭಿಯಾನ ಪ್ರಾರಂಭ: ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಅತಿ ಶೀಘ್ರವೇ 6ರಿಂದ 12 ನೇ ವರ್ಷದ ಮಕ್ಕಳ ಲಸಿಕೆ ಅಭಿಯಾನ ಪ್ರಾರಂಭ ಮಾಡಲಿದ್ದು, ಶಿಕ್ಷಣ ಇಲಾಖೆ ಸಚಿವರು, ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.

ಈ ಕುರಿತು ಮಾದ್ಯಮದವರೊಂದಿಗೆ ಮಾತನಾಡಿರುವ ಅವರು, ಇಡೀ ರಾಜ್ಯದಲ್ಲಿ ದೊಡ್ಡ ಮಟ್ಟದ ಅಭಿಯಾನ ಆರಂಭ ಮಾಡಲಿದ್ದು, ಸಿಎಂ ಬೊಮ್ಮಾಯಿ ಕೂಡಾ ಈಗಾಗಲೇ ಈ ಬಗ್ಗೆ ನನ್ನ ಜೊತೆ ಚರ್ಚೆ ಮಾಡಿದ್ದಾರೆ. ಸೋಮವಾರದಿಂದಲೇ ಲಸಿಕೆ ವಿತರಣೆ ಮಾಡಲು ನಾವು ತಯಾರಿ ಮಾಡಿ ಕೊಳುತ್ತಿದ್ದೇವೆ ಎಂದರು.

ಇನ್ನು ಬೇಸಿಗೆ ರಜೆ ಪ್ರಾರಂಭ ಆಗಿದ್ದು, ಹೀಗಾಗಿ ಶಾಲೆಯಲ್ಲಿ ಮಾಡಬೇಕಾ? ಆಯಾ ಇನ್‌ಸ್ಟಿಟ್ಯೂಷನ್ ನಲ್ಲಿ ಮಾಡಬೇಕಾ ಅಂತ ಚರ್ಚೆ ಮಾಡ್ತೀವಿ. ಇವತ್ತು ಎಲ್ಲಾ ವಿಚಾರ ಅಂತಿಮ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Join Whatsapp
Exit mobile version