Home ಟಾಪ್ ಸುದ್ದಿಗಳು ರಾಜ್ಯ ವಿಧಾನಸಭೆಯ ಹೊರಗೆ ಫೈರಿಂಗ್ । ಇನ್ಸ್’ಪೆಕ್ಟರ್ ಸಾವು

ರಾಜ್ಯ ವಿಧಾನಸಭೆಯ ಹೊರಗೆ ಫೈರಿಂಗ್ । ಇನ್ಸ್’ಪೆಕ್ಟರ್ ಸಾವು

ಉತ್ತರ ಪ್ರದೇಶದ ಅಸೆಂಬ್ಲಿಯ ಆವರಣದ ಗೇಟ್ ನಂ 7 ರ ಬಳಿ ಶೂಟಿಂಗ್ ಘಟನೆ ವರದಿಯಾಗಿದೆ. ಆರಂಭಿಕ ವರದಿಗಳ ಪ್ರಕಾರ, ಪೊಲೀಸ್ ಇನ್ಸ್’ಪೆಕ್ಟರ್ ಓರ್ವರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ರಾಜ್ಯ ವಿಧಾನಸಭೆಯ ಗೇಟ್ ಸಂಖ್ಯೆ 7 ರ ಹೊರಗಿನ ಪಾರ್ಕಿಂಗ್ ಪ್ರದೇಶದಲ್ಲಿ ಸರ್ವಿಸ್ ರಿವಾಲ್ವರ್‌ನಿಂದ ಗುಂಡುಗಳನ್ನು ಹಾರಿಸಲಾಗಿದ್ದು, ಪೊಲೀಸ್ ಇನ್ಸ್’ಪೆಕ್ಟರ್ ಹತರಾಗಿದ್ದಾರೆ.

ಉತ್ತರ ಪ್ರದೇಶದ ಅಸೆಂಬ್ಲಿಯ ಹೊರಗೆ ಭಾರೀ ಪೊಲೀಸ್ ಉಪಸ್ಥಿತಿಯನ್ನು ಕಾಯ್ದುಕೊಳ್ಳಲಾಗಿದ್ದು, ಭದ್ರತೆ ಹೆಚ್ಚಿರುವ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಯಲು ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

Join Whatsapp
Exit mobile version