ಅಯೋಧ್ಯೆ ಬಳಿಕ ಮಥುರಾದಲ್ಲೂ ಮಂದಿರ ನಿರ್ಮಾಣ: ಉತ್ತರ ಪ್ರದೇಶ ಡಿಸಿಎಂ ಹೇಳಿಕೆ

Prasthutha|

ಲಖ್ನೋ: ಅಯೋಧ್ಯೆಯಲ್ಲಿ ವೈಭವಯುತ ರಾಮಮಂದಿರ ನಿರ್ಮಾಣವಾಗುತ್ತಿದ್ದು, ಮಥುರಾದ ಕೃಷ್ಣ ಜನ್ಮಭೂಮಿಯಲ್ಲೊಂದು ಮಂದಿರ ನಿರ್ಮಿಸಲಿದ್ದೇವೆ ಎಂದು ಶಾಹಿ ಈದ್ಗಾ ಮಸೀದಿಯನ್ನು ಉಲ್ಲೇಖಿಸಿ ಉತ್ತರಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಹೇಳಿಕೆ ನೀಡಿದ್ದಾರೆ.

- Advertisement -

“ಅಯೋಧ್ಯೆ, ವಾರಣಾಸಿಯಲ್ಲಿ ವೈಭವಯುತ ರಾಮಮಂದಿರ ನಿರ್ಮಾಣವಾಗುತ್ತಿದೆ, ಈಗ ಮಥುರಾದ ಕೃಷ್ಣ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಕಾಯುತ್ತಿದ್ದೇವೆ ಎಂದು ಮೌರ್ಯ ಟ್ವೀಟ್ ಮಾಡಿದ್ದಾರೆ.

ಮಥುರಾದ ಶಾಹಿ ಈದ್ಗಾ ಮಸೀದಿಯಲ್ಲಿ ಶ್ರೀಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸುವುದಾಗಿ ಹಿಂದುತ್ವ ಗುಂಪುಗಳ ಬೆದರಿಕೆಯ ನಡುವೆಯೇ ಮೌರ್ಯ ಈ ಹೇಳಿಕೆ ನೀಡಿದ್ದಾರೆ. ಮಥುರಾದ ಪ್ರಸಿದ್ಧ ದೇಗುಲದ ಬಳಿಯ ಮಸೀದಿ ಇರುವ ಸ್ಥಳ ‘ಶ್ರೀಕೃಷ್ಣನ ಜನ್ಮಸ್ಥಳ’ ಎಂಬುದು ಬಿಜೆಪಿ ಸೇರಿದಂತೆ ಹಿಂದುತ್ವ ಸಂಘಟನೆಗಳ ವಾದ.

- Advertisement -

ಅಖಿಲ ಭಾರತ ಹಿಂದೂ ಮಹಾಸಭಾವು ಮಸೀದಿಯಲ್ಲಿ ಶ್ರೀಕೃಷ್ಣನ ವಿಗ್ರಹ ಸ್ಥಾಪಿಸುವುದಾಗಿಯೂ ಇತ್ತೀಚೆಗೆ ಬೆದರಿಕೆ ಹಾಕಿತ್ತು. ಹಿಂದೂ ಮಹಾಸಭಾದ ಬೆದರಿಕೆಗಳ ಹಿನ್ನೆಲೆಯಲ್ಲಿ ಮಥುರಾ ಜಿಲ್ಲಾಡಳಿತವು ಸಿಆರ್ಪಿಸಿ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿತ್ತು.

Join Whatsapp