ನೈನಿತಾಲ್: ವಾಹನವು ಕಮರಿಗೆ ಉರುಳಿದ ಪರಿಣಾಮ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಾಖಂಡದ ನೈನಿತಾಲ್ ಜಿಲ್ಲೆಯಲ್ಲಿ ವರದಿಯಾಗಿದೆ.
ಪೊಲೀಸರ ಪ್ರಕಾರ, ನೈನಿತಾಲ್ನ ಬೇತಾಲ್ ಘಾಟ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ವಿಶ್ರಮ್ ಚೌಧರಿ (50), ಧೀರಜ್ (45), ಅನಂತರಾಮ್ ಚೌಧರಿ (40), ವಿನೋದ್ ಚೌಧರಿ (38), ಉದಯರಾಮ್ ಚೌಧರಿ (55), ತಿಲಕ್ ಚೌಧರಿ (45) ಗೋಪಾಲ್ ಬಸ್ನಿಯಾತ್ (60) ಮತ್ತು ರಾಜೇಂದ್ರ ಕುಮಾರ್ ಎಂದು ಗುರುತಿಸಲಾಗಿದೆ.
ಮೃತರಲ್ಲಿ ಕುಮಾರ್ ಹೊರತುಪಡಿಸಿ ಉಳಿದವರು ನೇಪಾಳದವರು. ಗಾಯಗೊಂಡವರನ್ನು ಶಾಂತಿ ಚೌಧರಿ, ಛೋಟು ಚೌಧರಿ ಮತ್ತು ಪ್ರೇಮ್ ಬಹದ್ದೂರ್ ಎಂದು ಗುರುತಿಸಲಾಗಿದೆ.
ರಾತ್ರಿ 10.30 ರ ಸುಮಾರಿಗೆ ಬಸ್ಕೋಟ್ ಗ್ರಾಮದ ನಿವಾಸಿಯಾದ ಚಾಲಕ ರಾಜೇಂದ್ರ ಕುಮಾರ್ ವಾಹನದ ನಿಯಂತ್ರಣ ಕಳೆದುಕೊಂಡ ಪರಿಣಾಮ ವಾಹನ 200 ಮೀಟರ್ ಕಮರಿಗೆ ಉರುಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.