Home ಟಾಪ್ ಸುದ್ದಿಗಳು ಉತ್ತರಾಖಂಡ: ಮುಂದಿನ ಶೈಕ್ಷಣಿಕ ವರ್ಷದಿಂದ ಇಂಗ್ಲಿಷ್‌ ಜೊತೆಗೆ ಹಿಂದಿಯಲ್ಲಿ ಎಂಬಿಬಿಎಸ್‌

ಉತ್ತರಾಖಂಡ: ಮುಂದಿನ ಶೈಕ್ಷಣಿಕ ವರ್ಷದಿಂದ ಇಂಗ್ಲಿಷ್‌ ಜೊತೆಗೆ ಹಿಂದಿಯಲ್ಲಿ ಎಂಬಿಬಿಎಸ್‌

ಡೆಹ್ರಾಡೂನ್: ಕೇಂದ್ರ ಸರ್ಕಾರವು ಹಿಂದಿ ಭಾಷೆಗೆ ವಿಶೇಷ ಪ್ರಾಮುಖ್ಯತೆ ನೀಡುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ಶೈಕ್ಷಣಿಕ ವರ್ಷದಿಂದ ವೈದ್ಯಕೀಯ ಶಿಕ್ಷಣವನ್ನು ಇಂಗ್ಲಿಷ್‌ ಜೊತೆಗೆ ಹಿಂದಿಯಲ್ಲೂ ಬೋಧಿಸಲಾಗುವುದು ಎಂದು ಉತ್ತರಾಖಂಡದ ವೈದ್ಯಕೀಯ ಶಿಕ್ಷಣ ಸಚಿವ ಧನ್‌ ಸಿಂಗ್‌ ರಾವತ್‌ ಹೇಳಿದ್ದಾರೆ.


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್‌, ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆಯು ನಾಲ್ವರು ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಮಧ್ಯ ಪ್ರದೇಶದ ಸರ್ಕಾರಿ ಕಾಲೇಜುಗಳ ಎಂಬಿಬಿಎಸ್‌ ಹಿಂದಿ ಪಠ್ಯಗಳನ್ನು ಅಭ್ಯಸಿಸಿ, ಬಳಿಕ ಉತ್ತರಾಖಂಡದ ಎಂಬಿಬಿಎಸ್‌ ಹಿಂದಿ ಹೊಸ ಪಠ್ಯ ರಚನೆಯ ಡ್ರಾಫ್ಟ್ ಅನ್ನು ತಯಾರಿಸಲಿದೆ ಎಂದು ತಿಳಿಸಿದರು.


ಅಕ್ಟೋಬರ್‌ 16ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಎಂಬಿಬಿಎಸ್‌ನ ಮೂರು ಹಿಂದಿ ವಿಷಯಗಳ ಪಠ್ಯ ಪುಸ್ತಕಗಳನ್ನು ಬಿಡುಗಡೆ ಮಾಡಿದ್ದಾರೆ.


ಮಧ್ಯ ಪ್ರದೇಶದಲ್ಲಿ ಮೊದಲ ಬಾರಿಗೆ ವೈದ್ಯಕೀಯ ಶಿಕ್ಷಣವನ್ನು ಹಿಂದಿಯಲ್ಲಿ ಅಳವಡಿಸಿಕೊಂಡಿದ್ದು, ಇದೀಗ ಉತ್ತರಾಖಂಡವು ವೈದ್ಯಕೀಯ ಶಿಕ್ಷಣವನ್ನು ಹಿಂದಿಯಲ್ಲಿ ಅಳವಡಿಸುತ್ತಿರುವ ಎರಡನೇ ರಾಜ್ಯ ಎಂದೆನಿಸಿಕೊಳ್ಳಲಿದೆ.

Join Whatsapp
Exit mobile version