Home ಟಾಪ್ ಸುದ್ದಿಗಳು ವಿವಾದಾತ್ಮಕ ‘ಏಕರೂಪ ನಾಗರಿಕ ಸಂಹಿತೆ’ಯನ್ನು ಜಾರಿಗೊಳಿಸಲು ಮುಂದಾದ ಉತ್ತರಾಖಂಡ ಸರ್ಕಾರ

ವಿವಾದಾತ್ಮಕ ‘ಏಕರೂಪ ನಾಗರಿಕ ಸಂಹಿತೆ’ಯನ್ನು ಜಾರಿಗೊಳಿಸಲು ಮುಂದಾದ ಉತ್ತರಾಖಂಡ ಸರ್ಕಾರ

ವಿವಾದಗಳ ಸುಳಿಯಲ್ಲಿರುವ ‘ಏಕರೂಪ ನಾಗರಿಕ ಸಂಹಿತೆ’ ಕಾನೂನನ್ನು ಜಾರಿಗೊಳಿಸುವ ಎಲ್ಲಾ ಕಾರ್ಯಯೋಜನೆಗೆ ಉತ್ತರಾಖಂಡ ರಾಜ್ಯವು ಸಿದ್ಧತೆ ನಡೆಸಿದೆ.

“ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೆ ತರುವ ನಿರ್ಧಾರವನ್ನು ನಮ್ಮ ಸರ್ಕಾರ ಕೈಗೊಂಡಿದ್ದು, ಶೀಘ್ರದಲ್ಲೇ ತಜ್ಞರ ಸಮಿತಿಯನ್ನು ರಚಿಸಿ ರಾಜ್ಯಾದ್ಯಂತ ಜಾರಿಗೆ ತರಲಾಗುವುದು” ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.

ಸಚಿವ ಸಂಪುಟ ಸರ್ವಾನುಮತದಿಂದ ಈ ನಿರ್ಧಾರಕ್ಕೆ ಹಸಿರು ನಿಶಾನೆ ತೋರಿದ್ದು, ಉತ್ತರಾಖಂಡ ದೇಶದಲ್ಲೇ ಏಕರೂಪ ನಾಗರಿಕ ಸಂಹಿತೆ ಕಾನೂನನ್ನು ಜಾರಿಗೊಳಿಸಲು ನಿರ್ಧಾರ ಕೈಗೊಂಡಿರುವ ಪ್ರಥಮ ರಾಜ್ಯವಾಗಿದೆ.

Join Whatsapp
Exit mobile version