Home ಟಾಪ್ ಸುದ್ದಿಗಳು ‘ಪತಂಜಲಿ’ ತಯಾರಿಸಿದ 15 ಉತ್ಪನ್ನಗಳ ಪರವಾನಗಿ ರದ್ದುಪಡಿಸಿದ ಉತ್ತರಾಖಂಡ ಸರ್ಕಾರ

‘ಪತಂಜಲಿ’ ತಯಾರಿಸಿದ 15 ಉತ್ಪನ್ನಗಳ ಪರವಾನಗಿ ರದ್ದುಪಡಿಸಿದ ಉತ್ತರಾಖಂಡ ಸರ್ಕಾರ

ಉತ್ತರಾಖಂಡ: ಬಾಬಾ ರಾಮ್‌ದೇವ್ ಅವರ ಪತಂಜಲಿ ಆಯುರ್ವೇದ ತಯಾರಿಸಿದ ಸುಮಾರು 15 ಉತ್ಪನ್ನಗಳ ಉತ್ಪಾದನಾ ಪರವಾನಗಿಗಳನ್ನು ಉತ್ತರಾಖಂಡ ಸರ್ಕಾರ ಅಮಾನತುಗೊಳಿಸಿದೆ.

ಸರಕಾರದ ಏಪ್ರಿಲ್ 24 ರ ಅಧಿಸೂಚನೆಯಲ್ಲಿ‌ ಇದನ್ನು ತಿಳಿಸಲಾಗಿದ್ದು, ಆದೇಶವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

ಅವುಗಳ ಪರಿಣಾಮಕಾರಿತ್ವದ ಬಗ್ಗೆ ಪದೇ ಪದೇ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನ ಪ್ರಕಟಿಸಿದ್ದಕ್ಕಾಗಿ ಪರವಾನಗಿಗಳನ್ನ ತಡೆಹಿಡಿಯಲಾಗಿದೆ ಎಂದು ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ತಮ್ಮ ಕೆಲವು ಉತ್ಪನ್ನಗಳ ದಾರಿತಪ್ಪಿಸುವ ಜಾಹೀರಾತುಗಳನ್ನು ನಿಲ್ಲಿಸುವಂತೆ ನೀಡಿದ ನಿರ್ದೇಶನಗಳನ್ನು ಪಾಲಿಸದಿದ್ದಕ್ಕಾಗಿ ಸುಪ್ರೀಂ ಕೋರ್ಟ್ ರಾಮ್‌ದೇವ್ ಅವರನ್ನು ಪದೇ ಪದೇ ಟೀಕಿಸಿದೆ.

ರಾಮ್‌ದೇವ್ ವಿರುದ್ಧ ನ್ಯಾಯಾಂಗ ನಿಂದನೆ ಆರೋಪಗಳನ್ನು ಹೊರಿಸಬೇಕೇ ಅಥವಾ ಬೇಡವೇ ಎಂದು ಇಂದು (ಏಪ್ರಿಲ್ 30) ಸುಪ್ರೀಂ ಕೋರ್ಟ್ ಪತಂಜಲಿ ಪ್ರಕರಣದ ವಿಚಾರಣೆ ನಡೆಸಲಿದೆ.

Join Whatsapp
Exit mobile version