Home ಟಾಪ್ ಸುದ್ದಿಗಳು ಉತ್ತರ ಪ್ರದೇಶ: ಶೂ ಹಾಕಿಕೊಂಡು ದೇಗುಲ ಪ್ರವೇಶಿಸಿದ ಅಧಿಕಾರಿ ಅಮಾನತು

ಉತ್ತರ ಪ್ರದೇಶ: ಶೂ ಹಾಕಿಕೊಂಡು ದೇಗುಲ ಪ್ರವೇಶಿಸಿದ ಅಧಿಕಾರಿ ಅಮಾನತು

ಮಿರ್ಜಾಪುರ: ಮಿರ್ಜಾಪುರ ಜಿಲ್ಲೆಯ ವಿದ್ಯಾವಾಸಿನಿ ದೇವಾಲಯಕ್ಕೆ ಶೂ ಹಾಕಿಕೊಂಡು ಪ್ರವೇಶಿಸಿದ ಆರೋಪದಡಿ ಜಿಲ್ಲಾ ಕೃಷಿ ಅಭಿವೃದ್ಧಿ ಸಹಾಯಕ ಅಧಿಕಾರಿಯನ್ನು(ಎಡಿಒ) ಕೆಲಸದಿಂದ ಅಮಾನತು ಮಾಡಲಾಗಿದೆ.


ಉಪವಿಭಾಗಾಧಿಕಾರಿಯಾಗಿ ಆಗಿಯೂ ಕೆಲಸ ಮಾಡುತ್ತಿರುವ ಪ್ರತೀಕ್ ಕುಮಾರ್ ಸಿಂಗ್ ಶೂ ಹಾಕಿಕೊಂಡು ದೇಗುಲ ಪ್ರವೇಶಿಸಿದ್ದನ್ನು ಶಾಸಕ ರತ್ನಾಕರ್ ಮಿಶ್ರಾ ಗಮನಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.


ಅಲ್ಲದೆ, ಅಧಿಕಾರಿಗೆ ಛೀಮಾರಿ ಹಾಕಿದ ಶಾಸಕರು, ದೇಗುಲದ ಆವರಣದಿಂದ ಹೊರಗೆ ಕಳುಹಿಸಿದ್ದಾರೆ.


ಘಟನೆಯ ಮಾಹಿತಿ ಬಂದ ಕೂಡಲೇ ಎಡಿಒ ಅಮಾನತಿಗೆ ಮಿರ್ಜಾಪುರ ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಕೃಷಿ ಇಲಾಖೆಯ ಉಪ ಆಯುಕ್ತ ವಿಕಾಸ್ ಪಟೇಲ್ ಅವರು ಆದೇಶಿಸಿದ್ದಾರೆ.

Join Whatsapp
Exit mobile version