ರಾಮ, ಕೃಷ್ಣ ಮತ್ತು ಶಿವ ಇಲ್ಲಿನ ಮುಸ್ಲಿಮರ ಪೂರ್ವಜರು ಎಂದ ಉ.ಪ್ರದೇಶ ಸಚಿವ !

Prasthutha|

ಉತ್ತರ ಪ್ರದೇಶ: ರಾಮ, ಕೃಷ್ಣ ಮತ್ತು ಶಿವ ಭಾರತದ ಮುಸ್ಲಿಮರ ಪುರ್ವಜರಾಗಿದ್ದಾರೆ ಎಂದು ಉತ್ತರ ಪ್ರದೇಶ ಸಂಸದೀಯ ವ್ಯವಹಾರಗಳ ಸಚಿವ ಆನಂದ್ ಸ್ವರೂಪ್ ಶುಕ್ಲಾ ಹೇಳಿದ್ದಾರೆ. ಅಲ್ಲದೇ ಮುಸ್ಲಿಂ ಸಮುದಾಯ ಭಾರತೀಯ ಸಂಸ್ಕೃತಿಗೆ ತಲೆಬಾಗಬೇಕು ಎಂದು ಕರೆ ನೀಡಿದ್ದಾರೆ.

ಯೋಗಿ ಸರಕಾರದ ನಾಲ್ಕುವರೆ ವರ್ಷಗಳ ಸಾಧನೆಗಳ ಕುರಿತು ಮಾಹಿತಿ ನೀಡುವ ಸಲುವಾಗಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸ್ವರೂಪ್ ಶುಕ್ಲಾ ಮೋದಿ ಮತ್ತು ಆದಿತ್ಯನಾಥ ಸರಕಾರ ಭಾರತವು ಇಸ್ಲಾಮೀ ರಾಷ್ಟ್ರವಾಗುವುದನ್ನು ತಡೆದಿದ್ದಾರೆ ಎಂದರು. ಅಲ್ಲದೇ ಮುಸ್ಲಿಮರ ಪೂರ್ವಜರು ನಮ್ಮ ರಾಮ, ಕೃಷ್ಣ, ಮತ್ತು ಶಂಕರರಾಗಿದ್ದಾರೆ, ಆದ್ದರಿಂದ ಈ ಸಮುದಾಯ ಭಾರತೀಯ ಸಂಸ್ಕೃತಿಗೆ ತಲೆಬಾಗಬೇಕು ಎಂದಿದ್ದಾರೆ.

- Advertisement -

ಜಗತ್ತಿನ ಅನೇಕ ರಾಷ್ಟ್ರಗಳು ಭಾರತವನ್ನು ಇಸ್ಲಾಮಿಕ್ ರಾಷ್ಟ್ರಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿವೆ, ಭಾರತದಲ್ಲೂ ಅನೇಕರು ಪ್ರಯತ್ನಿಸುತ್ತಿದ್ದಾರೆ, ಇವರೆಲ್ಲರನ್ನೂ ಮೋದಿ ಮತ್ತು ಆದಿತ್ಯನಾಥ ನೇತೃತ್ವದ ಸರಕಾರಗಳು ಭಾರತೀಯ ಸಂಸ್ಕೃತಿಯ ಧ್ವಜವನ್ನು ಹಾರಿಸುವ ಮೂಲಕ ಇಸ್ಲಾಮೀ ಮನಸ್ಥಿತಿಯನ್ನು ಸೋಲಿಸಿದ್ದಾರೆ ಎಂದು ಶುಕ್ಲಾ ಹೇಳಿದರು.

- Advertisement -