ಉತ್ತರ ಪ್ರದೇಶ, ಮಣಿಪುರ ಮತ್ತು ಕಾಶ್ಮೀರದಲ್ಲಿ ಅತೀ ಹೆಚ್ಚು UAPA ಕೈದಿಗಳು

Prasthutha|

ಲಕ್ನೋ: 2018 – 2020 ಸಾಲಿನಲ್ಲಿ UAPA ಕಾಯ್ದೆ ಅಡಿಯಲ್ಲಿ ಬಂಧಿತರಾದ ಶೇಕಡಾ 57 ರಷ್ಟು ಜನರು 30 ವರ್ಷಕ್ಕಿಂತ ಕೆಳಗಿನವರು. ಇವರಲ್ಲಿ ಹೆಚ್ಚಿನವರು ಉತ್ತರ ಪ್ರದೇಶ, ಮಣಿಪುರ ಮತ್ತು ಕಾಶ್ಮೀರ ರಾಜ್ಯದವರು ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಸಂಗ್ರಹಿಸಿದ ಅಂಕಿಅಂಶಗಳಿಂದ ಬಹಿರಂಗವಾಗಿದೆ.

- Advertisement -

ಈ ಕುರಿತು ಸಂಸತ್ ನಲ್ಲಿ ವರದಿ ಮಂಡಿಸಿದ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ, ವಿವಿಧ ರಾಜ್ಯಗಳಲ್ಲಿ UAPA ಕಾಯ್ದೆ ಅಡಿಯಲ್ಲಿ ಬಂಧಿತರಾದವರ ಮಾಹಿತಿಯನ್ನು ಅಂಕಿಅಂಶಗಳೊಂದಿಗೆ ಬಹಿರಂಗಪಡಿಸಿದರು. ಇದರಲ್ಲಿ ಹೆಚ್ಚಿನವರು 30 ವರ್ಷಕ್ಕಿಂತ ಕೆಳಗಿನವರು ಎಂಬುದು ಆಘಾತಕಾರಿಯಾಗಿದೆ.

ಪ್ರಸಕ್ತ ಈ ಕ್ರೂರ ಕಾಯ್ದೆಯನ್ವಯ ತನಿಖಾಧಿಕಾರಿಗಳು ಶಂಕಿತ ಭಯೋತ್ಪಾದಕ ಎಂಬ ಆರೋಪದಲ್ಲಿ ಯಾವುದೇ ವ್ಯಕ್ತಿಯನ್ನು ಬಂಧಿಸುವ, ದೋಷಾರೋಪ ಪಟ್ಟಿ ಸಲ್ಲಿಸದೆ, ಸಾಕ್ಷ್ಯವನ್ನು ಒದಗಿಸದೆ ಜೈಲಿನಲ್ಲಿಡಬಹುದು ಎಂದು ಹೇಳಲಾಗಿದೆ.

- Advertisement -

ಕಳೆದ ಮೂರು ವರ್ಷಗಳಲ್ಲಿ ಈ ಕರಾಳ ಕಾಯ್ದೆ ಅಡಿಯಲ್ಲಿ ದೇಶಾದ್ಯಂತ UAPA 4690 ಮಂದಿಯನ್ನು ಬಂಧಿಸಲಾಗಿದೆ. ಇದರಲ್ಲಿ 2501 ಅಥವಾ ಶೇಕಡಾ 53.32 ಮಂದಿ 30 ವರ್ಷಕ್ಕಿಂತ ಕೆಳಗಿನವರು ಎಂಬುದು ವಾಸ್ತವ.

ಉತ್ತರ ಪ್ರದೇಶದಿಂದ ಈ ಕಾಯ್ದೆ ಅಡಿಯಲ್ಲಿ ಬಂಧಿತರ ಪೈಕಿ 1338 ಮಂದಿಯ ಪೈಕಿ 931 ಅಥವಾ ಶೇಕಡಾ 69.5 ರಷ್ಟು ಮಂದಿ 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಮಣಿಪುರದಲ್ಲಿ 943 ಮಂದಿಯ ಬಂಧನದೊಂದಿಗೆ 2 ನೇ ಸ್ಥಾನದಲ್ಲಿದೆ ಮತ್ತು ಕಾಶ್ಮೀರ 750 ಪ್ರಕರಣದೊಂದಿಗೆ 3 ನೇ ಸ್ಥಾನವನ್ನು ಗಳಿಸಿದೆ ಎಂಬ ಆಘಾತಕಾರಿ ಅಂಶಗಳು ಅಪರಾಧ ಬ್ಯೂರೋ ಅಂಕಿಅಂಶದಿಂದ ಬಹಿರಂಗವಾಗಿದೆ.

Join Whatsapp