Home ಟಾಪ್ ಸುದ್ದಿಗಳು ಉತ್ತರ ಪ್ರದೇಶ: ಆಸ್ಪತ್ರೆಯ ಬಿಲ್‌ ಕಟ್ಟಲು ಹಣವಿಲ್ಲ ಎಂದು ಹೆತ್ತ ಕಂದನನ್ನೇ ಮಾರಿದ ತಂದೆ

ಉತ್ತರ ಪ್ರದೇಶ: ಆಸ್ಪತ್ರೆಯ ಬಿಲ್‌ ಕಟ್ಟಲು ಹಣವಿಲ್ಲ ಎಂದು ಹೆತ್ತ ಕಂದನನ್ನೇ ಮಾರಿದ ತಂದೆ

ಉತ್ತರ ಪ್ರದೇಶ: ಆಸ್ಪತ್ರೆಯ ಬಿಲ್‌ ಕಟ್ಟಲಾಗದೆ ತಂದೆಯಾದವನು ತನ್ನ ಹೆತ್ತ ಕಂದಮ್ಮನನ್ನೇ ಮಾರಾಟ ಮಾಡಿರುವ ಘಟನೆ ಉತ್ತರ ಪ್ರದೇಶದ ಕುಶಿನಗರದಲ್ಲಿ ನಡೆದಿದೆ.

ಬಾಣಂತಿ ಪತ್ನಿ ಮತ್ತು ನವಜಾತ ಶಿಶುವನ್ನು ಆಸ್ಪತ್ರೆಯಿಂದ ಬಿಡಿಸಲು ಹಣವಿಲ್ಲ ಎಂದು ತಂದೆಯೊಬ್ಬ ತನ್ನ ಮೂರು ವರ್ಷದ ಮಗುವನ್ನು 20 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾನೆ. ಈ ವಿಷಯ ಎಲ್ಲೆಡೆ ಹರಿದಾಡುತ್ತಿದ್ದಂತೆ ಮಗುವನ್ನು ರಕ್ಷಣೆ ಮಾಡಿ ಈ ಕೃತ್ಯದಲ್ಲಿ ಭಾಗಿಯಾದ ಐವರನ್ನು ಬಂಧಿಸಲಾಗಿದೆ.

ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, ಈ ಘಟನೆ ಉತ್ತರ ಪ್ರದೇಶದ ಕುಶಿನಗರದಲ್ಲಿ ನಡೆದಿದ್ದು, ತಂದೆಯೇ ತನ್ನ ಹೆತ್ತ ಮಗನನ್ನು ಬೇರೊಬ್ಬರಿಗೆ ಮಾರಾಟ ಮಾಡಿದ್ದಾನೆ. ಬರ್ವಾ ಪಟ್ಟಿಯ ನಿವಾಸಿ ಹರೀಶ್‌ ಪಟೇಲ್‌ ಎಂಬಾತ ಹೆರಿಗೆಗಾಗಿ ತನ್ನ ತುಂಬು ಗರ್ಭಿಣಿ ಪತ್ನಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದ. ಆಸ್ಪತ್ರೆಯಲ್ಲಿ ನಾಲ್ಕು ಸಾವಿರ ಬಿಲ್‌ ಆಗಿದ್ದು, ಬಿಲ್‌ ಕಟ್ಟದೆ ಪತ್ನಿ ಮತ್ತು ನವಜಾತ ಶಿಶುವನ್ನು ಡಿಸ್ಚಾರ್ಜ್‌ ಮಾಡಲು ಆಸ್ಪತ್ರೆಯ ಸಿಬ್ಬಂದಿಗಳು ನಿರಾಕರಿಸಿದ್ದಾರೆ.

ಕೂಲಿ ಕೆಲಸ ಮಾಡುತ್ತಿದ್ದ ಆತನ ಕೈಯಲ್ಲಿ ಅಷ್ಟು ಮೊತ್ತದ ಬಿಲ್‌ ಪಾವತಿಸಲು ಸಾಧ್ಯವಾಗಲಿಲ್ಲ. ಇದರಿಂದ ಚಿಂತೆಗೊಳಗಾದ ಆತ ಆಸ್ಪತ್ರೆಯಲ್ಲಿದ್ದ ಕೆಲವರ ಸಲಹೆಯ ಮೇರೆಗೆ ಬಲವಂತವಾಗಿ ಮಗುವನ್ನು ಕೇವಲ 20 ಸಾವಿರ ರೂಪಾಯಿಗೆ ನಕಲಿ ದತ್ತು ದಾಖಲೆಯಡಿ ಬೇರೊಬ್ಬ ದಂಪತಿಗೆ ಮಾರಾಟ ಮಾಡಿದ್ದಾನೆ.ಈ ವಿಷಯ ಪೊಲೀಸರಿಗೆ ಗೊತ್ತಾಗುತ್ತಿದ್ದಂತೆ ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿ ಮಗುವನ್ನು ರಕ್ಷಿಸಿ, ಪೋಷಕರಿಗೆ ಒಪ್ಪಿಸಿದ್ದಾರೆ.

Join Whatsapp
Exit mobile version