Home ಟಾಪ್ ಸುದ್ದಿಗಳು ಉತ್ತರ ಪ್ರದೇಶ ಚುನಾವಣೆ| ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಜತೆ 11,000 ರೂ. ಪಕ್ಷಕ್ಕೆ ನೀಡಬೇಕು!

ಉತ್ತರ ಪ್ರದೇಶ ಚುನಾವಣೆ| ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಜತೆ 11,000 ರೂ. ಪಕ್ಷಕ್ಕೆ ನೀಡಬೇಕು!

ಲಖನೌ: ಉತ್ತರಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪಕ್ಷದ ಟಿಕೆಟ್ ಆಕಾಂಕ್ಷಿಗಳು ತಮ್ಮ ಅರ್ಜಿಗಳೊಂದಿಗೆ 11,000 ರೂ. ನೀಡುವಂತೆ ಕಾಂಗ್ರೆಸ್ ಸೂಚಿಸಿದೆ.

ಈ ಕುರಿತು ಆದೇಶ ಹೊರಡಿಸಿರುವ ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ(ಯುಪಿಸಿಸಿ) ಅಧ್ಯಕ್ಷ ಅಜಯ್ ಕುಮಾರ್ ಲಲ್ಲು, “ಎಲ್ಲಾ ಅರ್ಜಿದಾರರು ಜಿಲ್ಲಾ/ರಾಜ್ಯ ಮಟ್ಟದಲ್ಲಿ ಅಧಿಕೃತ ವ್ಯಕ್ತಿಗಳ ಬಳಿ ತಮ್ಮ ಅರ್ಜಿಗಳನ್ನು ಮತ್ತು 11,000 ರೂ. ಅನ್ನು ಸೆಪ್ಟೆಂಬರ್ 25, 2021 ರೊಳಗೆ ಸಲ್ಲಿಸಬೇಕು” ಎಂದು ತಿಳಿಸಿದ್ದಾರೆ.

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿ ಎರಡು ದಿನಗಳ ಕಾಲ ನಡೆದ ಚಿಂತನಶೀಲ ಅಧಿವೇಶನದ ನಂತರ ಕಳೆದ ವಾರ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕಾಂಗ್ರೆಸ್ ಆಹ್ವಾನಿಸಿತ್ತು.

” ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿರುವ ಕಾರ್ಯಕರ್ತರು ರಾಜ್ಯ ಅಥವಾ ಜಿಲ್ಲಾ ಕೇಂದ್ರದಲ್ಲಿ ತಮ್ಮ ಅರ್ಜಿಗಳನ್ನು ನೀಡಬಹುದು” ಎಂದು ಕಾಂಗ್ರೆಸ್ ವಕ್ತಾರರಾದ ಡಾ ಉಮಾ ಶಂಕರ್ ಪಾಂಡೆ ಹೇಳಿದ್ದಾರೆ.

Join Whatsapp
Exit mobile version