ಉತ್ತರ ಪ್ರದೇಶದಲ್ಲಿ ಬಿಜೆಪಿಯ ಗೂಂಡಾ ರಾಜ್: ಮಹಿಳಾ ಅಧಿಕಾರಿಯ ಅಪಹರಣವನ್ನು ತಡೆಯಲು ಬಂದ ಮೈದುನನ ಗುಂಡಿಕ್ಕಿ ಹತ್ಯೆ!

Prasthutha: July 9, 2021

ಮನೆಗೆ ನುಗ್ಗಿ ಬಿಜೆಪಿ ಪರ ಮತ ಚಲಾಯಿಸುವಂತೆ ಒತ್ತಡ ಹೇರುವ ಪ್ರಯತ್ನ!

ಲಕ್ನೋ: ಉತ್ತರಪ್ರದೇಶದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯ ಕಾವು ತಾರಕಕ್ಕೇರುತ್ತಿದ್ದಂತೆಯೇ ಬ್ಲಾಕ್ ಡೆವಲಪ್ಮೆಂಟ್ ಕಮಿಟಿ ಸದಸ್ಯೆಯೊಬ್ಬರನ್ನು ಅಪಹರಿಸುತ್ತಿದ್ದಾಗ ತಡೆಯಲು ಬಂದ ಮೈದುನನನ್ನು ಬಿಜೆಪಿ ಕಾರ್ಯಕರ್ತರು ಗುಂಡಿಕ್ಕಿ ಹತ್ಯೆಗೈದಿದ್ದಾರೆ.

ಬಿಜೆಪಿ ಅಭ್ಯರ್ಥಿ ಸರಿತಾ ಯಜ್ಞ ಸೈನಿ ಅವರ ಪತಿ ಸುಧೀರ್ ಯಜ್ಞ ಸೈನಿ ಮತ್ತು ಅವರ ಅನುಯಾಯಿಗಳು ಅಭ್ಯರ್ಥಿಯ ಗನ್ ಮ್ಯಾನ್ ನೊಂದಿಗೆ ಬ್ಲಾಕ್ ಡೆವಲಪ್ಮೆಂಟ್ ಕಮಿಟಿ (ಬಿಡಿಸಿ) ಸದಸ್ಯೆ ಯದುರೈ ದೇವಿ ಅವರ ಮನೆಗೆ ತೆರಳಿದ್ದು, ಅವರು ಜುಲೈ 10 ರ ಚುನಾವಣೆಯಲ್ಲಿ ತಮ್ಮ ಪರವಾಗಿ ಮತ ಚಲಾಯಿಸಲು ಯದುರೈ ದೇವಿಯನ್ನು ಅಪಹರಿಸಲು ಯತ್ನಿಸಿದ್ದಾರೆ. ಇದನ್ನು ತಡೆಯಲು ಬಂದ ಯದುರೈ ದೇವಿಯ ಮೈದುನ ಮಾಯರಾಮಿ (60) ಅವರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸುಧೀರ್ ಯಜ್ಞ ಸೈನಿ ಮತ್ತು ಅವರ ಪತ್ನಿ ಸರಿತಾ ಯಜ್ಞ ಸೈನಿಯ ಗನ್ ಮ್ಯಾನ್ ಸೇರಿದಂತೆ 10 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕಿ ಸುಜಾತಾ ಸಿಂಗ್ ತಿಳಿಸಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಭದ್ರತಾ ವ್ಯವಸ್ಥೆಗಳನ್ನು ಜಾರಿಗೆ ತರಲಾಗಿದೆ ಮತ್ತು ಆರೋಪಿಗಳ ಮೇಲೆ ಕಠಿಣ ರಾಷ್ಟ್ರೀಯ ಭದ್ರತಾ ಕಾನೂನು ಹೇರಲಾಗುವುದು ಎಂದು ಅವರು ಹೇಳಿದರು.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಸಮಾಜವಾದಿ ಪಾರ್ಟಿ ಜಿಲ್ಲಾಧ್ಯಕ್ಷ ರಾಮ್‌ ಹರ್ಷ್ ಯಾದವ್, ಪೊಲೀಸರು ಬಿಜೆಪಿಯ ಏಜೆಂಟರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದಕ್ಕಾಗಿಯೇ ಬಿಜೆಪಿ ಕಾರ್ಯಕರ್ತರು ಇಂತಹ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ