ಕಾನ್ಪುರ್: ಮನೆಯಲ್ಲಿ 288 ಕಚ್ಚಾ ಬಾಂಬ್ ಗಳನ್ನು ಪತ್ತೆಯಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಕ್ರೈಂ ಬ್ರಾಂಚ್ ಮತ್ತು ಕಾನ್ಪುರ್ ಪೊಲೀಸರ ತಂಡಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಲಕ್ಷ್ಮೀಪುರದಲ್ಲಿರುವ 20 ವರ್ಷದ ಯುವತಿಯೊಬ್ಬಳ ಮನೆಯೊಂದರಿಂದ ಶುಕ್ರವಾರ ಕನಿಷ್ಠ 288 ಕಚ್ಚಾ ಬಾಂಬ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣ ಸಂಬಂಧ ವಾಸು ಸೋಂಕರ್, ಟೀನಾ ಗುಪ್ತಾ ರನ್ನು ಬಂಧಿಸಲಾಗಿದ್ದು, ದೊಡ್ಡ ಸಂಭವೀಯ ದುರಂತವೊಂದನ್ನು ತಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಯ ಪ್ರಕಾರ, ಬದರ್ ಜಿಲ್ಲೆಯ ನಿವಾಸಿ ವಾಸು ಸೋಂಕರ್ ಎಂಬಾತನನ್ನು ಪೊಲೀಸರು ಗುರುವಾರ 16 ಕಚ್ಚಾ ಬಾಂಬ್ ಗಳೊಂದಿಗೆ ಬಂಧಿಸಿದ್ದಾರೆ. ವಿಚಾರಣೆ ವೇಳೆ ಸೋಂಕರ್ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಕ್ರೈಂ ಬ್ರಾಂಚ್’ಗಳೊಂದಿಗೆ ಲಕ್ಷ್ಮೀಪುರದಲ್ಲಿರುವ ವಾಸು ಅವರ ಗೆಳತಿ 20 ವರ್ಷದ ಟೀನಾ ಗುಪ್ತಾ ಅವರ ಮನೆ ಮೇಲೆ ದಾಳಿ ನಡೆಸಿದ್ದರು. ಪೊಲೀಸರು ಆಕೆಯ ನಿವಾಸದಿಂದ ಕನಿಷ್ಠ 288 ಬಾಂಬ್ಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಸ್ಥಳದಲ್ಲೇ ಅವಳನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.