Home ಕರಾವಳಿ ಯುಟಿ ಖಾದರ್ ತೇಜೋವಧೆಗೆ ಯತ್ನ; ವಿಟ್ಲ ಮೂಲದ ‘ವಿಟಿವಿ’ ನ್ಯೂಸ್, ‘ಹೊಸ ಕನ್ನಡ’ ದ ವಿರುದ್ಧ...

ಯುಟಿ ಖಾದರ್ ತೇಜೋವಧೆಗೆ ಯತ್ನ; ವಿಟ್ಲ ಮೂಲದ ‘ವಿಟಿವಿ’ ನ್ಯೂಸ್, ‘ಹೊಸ ಕನ್ನಡ’ ದ ವಿರುದ್ಧ ದೂರು!

ಮಂಗಳೂರು: ಇತ್ತೀಚಿಗೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪ ಭಿನ್ನ ಕೋಮಿನ ಜೋಡಿ ಪತ್ತೆಯಾಗಿರುವ ಸಂಬಂಧ ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಯುಟಿ ಖಾದರ್ ಅವರನ್ನು ತೇಜೋವಧೆಗೊಳಿಸಿ ಸುದ್ದಿ ಪ್ರಕಟಿಸಿದ ಸ್ಥಳೀಯ ಮಾಧ್ಯಮಗಳ ವಿರುದ್ಧ ರಾಜ್ಯ ಡಿಜಿ&ಐಜಿಪಿ ಹಾಗೂ ಪಶ್ಚಿಮ ವಲಯ ಐಜಿಪಿ ಅವರಿಗೆ ದೂರು ನೀಡಲಾಗಿದೆ.

ಸ್ವತಃ ಯುಟಿ ಖಾದರ್ ಅವರೇ ಡಿಜಿಪಿ ಹಾಗೂ ಪಶ್ಚಿಮ ವಲಯ ಐಜಿಪಿ ಅವರಿಗೆ ದೂರು ದಾಖಲಿಸಿದ್ದಾರೆ. ವಿಟ್ಲ ಮೂಲದ ‘ವಿಟಿವಿʼ ನ್ಯೂಸ್ ಮತ್ತು ‘ಹೊಸ ಕನ್ನಡ’ ಎಂಬ ಸ್ಥಳೀಯ ಸುದ್ದಿ ಮಾಧ್ಯಮಗಳು ಅನೈತಿಕ ಗೂಂಡಾಗಿರಿ ಪ್ರಕರಣ ಸಂಬಂಧ ತನ್ನ ತೇಜೋವಧೆಗೆ ಯತ್ನಿಸಿ ರಾಜಕೀಯ ಜೀವನಕ್ಕೆ ಕಳಂಕ ತರುವ ಪ್ರಯತ್ನ ನಡೆದಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಜರಗಿಸುವಂತೆ ವಿಧಾನ ಸಭೆಯ ವಿಪಕ್ಷ ಉಪ ನಾಯಕ ಯು.ಟಿ. ಖಾದರ್ ದೂರು ಸಲ್ಲಿಸಿದ್ದಾರೆ.

ದ.ಕ.ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಶಾಂತಿ ಕದಡುವ ಉದ್ದೇಶದಿಂದ ಕೆಲವು ಶಕ್ತಿಗಳು ಧರ್ಮಗಳ ಮಧ್ಯೆ ವೈಮನಸ್ಸು ಹುಟ್ಟು ಹಾಕುವ ಕೆಲಸ ಮಾಡುತ್ತಿವೆ. ಅದಕ್ಕೆ ಕೆಲವು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪುಷ್ಠೀಕರಿಸುವ ಕೆಲಸವೂ ನಡೆಯುತ್ತಿದೆ. ಎ.5ರಂದು ವಿಟ್ಲದಲ್ಲಿ ಪತ್ತೆಯಾದ ವಿಭಿನ್ನ ಜೋಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲದ ನೆಟ್‌ವರ್ಕ್ ಮೀಡಿಯಾ ವಿಟಿವಿ ನ್ಯೂಸ್ ಮತ್ತು ಹೊಸಕನ್ನಡ ಎಂಬ ಸುದ್ದಿ ಮಾಧ್ಯಮಗಳಲ್ಲಿ ನನ್ನ ಹೆಸರಿಗೆ ಕಳಂಕ ತರುವ ಪ್ರಯತ್ನ ನಡೆದಿದೆ. ಹಾಗಾಗಿ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಜರಗಿಸಬೇಕು ಎಂದು ಡಿಜಿಪಿ, ಐಜಿಪಿ ಅವರಿಗೆ ನೀಡಿದ ದೂರಿನಲ್ಲಿ ಯು.ಟಿ.ಖಾದರ್ ತಿಳಿಸಿದ್ದಾರೆ.

Join Whatsapp
Exit mobile version