►ಫ್ಯಾಕ್ಟ್ ಚೆಕ್: ಕಾಂಗ್ರೆಸ್ ಚಿಂತನ್ ಶಿವಿರ್ ನ ಮೇಲ್ಛಾವಣಿ ಪಾಕಿಸ್ತಾನದ ಧ್ವಜವನ್ನು ಹೋಲುವುದಿಲ್ಲ
ನವದೆಹಲಿ: ಮೇ 15ರ ಭಾನುವಾರ ರಾಜಸ್ಥಾನದ ಉದಯಪುರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಮಾವೇಶದ ಮೇಲ್ಪರದೆಗಳು ಪಾಕಿಸ್ತಾನದ ಧ್ವಜವನ್ನು ಪ್ರತಿನಿಧಿಸುತ್ತದೆ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂಬುದು ಸ್ಪಷ್ಟಗೊಂಡಿದೆ.
ಸಭೆಯ ಮೇಲ್ಛಾವಣಿ ಹಸಿರು ಮತ್ತು ಬಿಳಿ ಬಣ್ಣದಾಗಿದ್ದು ಇದು ಪಾಕಿಸ್ತಾನದ ರಾಷ್ಟ್ರಧ್ವಜವನ್ನು ಹೋಲುತ್ತದೆ, ಮತ್ತು ನೆಲದ ಮೇಲಿನ ರತ್ನಗಂಬಳಿ ಕೇಸರಿಯಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
“ಮೇಲಿನ ಪಾಕಿಸ್ತಾನದ ಧ್ವಜದ ಎರಡೂ ಬಣ್ಣಗಳು ಮತ್ತು ನೆಲದ ಮೇಲೆ ಕೇಸರಿ! ಇದು ರಾಜಸ್ಥಾನದ ಉದಯಪುರದಲ್ಲಿ ಕಾಂಗ್ರೆಸ್ ಪಕ್ಷದ ಚಿಂತನ್ ಶಿವೀರ್ ಅವರ ಚಿತ್ರ” ಎಂದು ಟ್ವೀಟ್ ಮೂಲಕ ಹಲವಾರು ಮಂದಿ ಹಂಚುತ್ತಿದ್ದಾರೆ.
ಆದರೆ ಬಿಡಾರದ ಮೇಲ್ಛಾವಣಿಯು ಭಾರತೀಯ ರಾಷ್ಟ್ರಧ್ವಜದ ಮೂರೂ ಬಣ್ಣಗಳನ್ನೂ ಒಳಗೊಂಡಿದ್ದು ಅರ್ಧ ಚಿತ್ರವನ್ನು ಮಾತ್ರ ಬಳಸಿ ಸುಳ್ಳುಸುದ್ದಿ ಹಂಚಲಾಗಿದೆ. ಪಕ್ಷದ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಮತ್ತು ಸುದ್ದಿ ಮಾಧ್ಯಮಗಳು ನೈಜ ಚಿತ್ರ ಕಾಣಲು ಸಾಧ್ಯವಾಗುತ್ತಿದೆ.
ಮೇಲ್ಚಾವಣಿಯು ಪಾಕ್ ಧ್ವಜವಲ್ಲ ಮತ್ತು ಸೋನಿಯಾ ಗಾಂಧಿಯನ್ನು ಸ್ವಾಗತಿಸಲು ಬಳಸಿದ ಬಣ್ಣ ಭಾರತದ ರಾಷ್ಟ್ರಧ್ವಜದಲ್ಲಿರುವ ಕೇಸರಿ ಬಣ್ಣವೂ ಅಲ್ಲ ಎಂದು ತಿಳಿದುಬಂದಿವೆ.