ವಾಷಿಂಗ್ಟನ್: ಅಮೆರಿಕ ಸಂಯುಕ್ತ ಸಂಸ್ಥಾನದ ಜಾರ್ಜಿಯಾ ರಾಜ್ಯದ ಅಸೆಂಬ್ಲಿಯು ಹಿಂದೂಪೋಬಿಯಾ ಖಂಡಿಸಿ ನಿರ್ಣಯ ಕೈಗೊಂಡಿದೆ. ಹೀಗೆ ನಿರ್ಣಯ ತೆಗೆದುಕೊಂಡ ಅಮೆರಿಕದ ಮೊದಲ ರಾಜ್ಯವಾಗಿದೆ ಜಾರ್ಜಿಯಾ.
ಜಾರ್ಜಿಯಾದ ಅಟ್ಲಾಂಟಾವು ಹೆಚ್ಚು ಭಾರತೀಯರು ಇರುವ ಪ್ರದೇಶವಾಗಿದೆ. ಅಟ್ಲಾಂಟದ ಹೊರ ವಲಯದ ಫೋರ್ಸಿತ್ ಕೌಂಟಿಯ ಜನಪ್ರತಿನಿಧಿ ಲಾರೆನ್ ಮೆಕ್ ಡೊನಾಲ್ಡ್ ಈ ನಿರ್ಣಯ ಮಂಡಿಸಿದ್ದನ್ನು ಅಸೆಂಬ್ಲಿ ಅದನ್ನು ಎತ್ತಿ ಹಿಡಿಯಿತು.
ಇದೇ ವೇಳೆ 100 ದೇಶಗಳಲ್ಲಿ 120 ಕೋಟಿ ಹಿಂದೂಗಳು ಇದ್ದು, ಅದು ಶಾಂತಿಗೆ ಹೆಸರಾಗಿದೆ, ಅಲ್ಲಿ ಹಿಂದೂಪೋಬಿಯಾಕ್ಕೆ ಸ್ಥಳವಿಲ್ಲ ಎಂದು ಹೇಳಲಾಯಿತು.
ಅಮೆರಿಕದ ವೈದ್ಯಕೀಯ, ತಂತ್ರಜ್ಞಾನ, ಐಟಿ, ವಿಜ್ಞಾನ, ಆಹಾರ ಇತ್ಯಾದಿ ಕ್ಷೇತ್ರದಲ್ಲಿ ಭಾರತೀಯ ಹಿಂದೂಗಳ ಪಾತ್ರವನ್ನು ಈ ಸಂದರ್ಭದಲ್ಲಿ ಎತ್ತಿ ಹೇಳಲಾಯಿತು. ಯಶಸ್ವಿಯಾಗಿ ಅವರು ಅಮೆರಿಕದ ಸಮಾಜದಲ್ಲಿ ಒಂದಾಗಿರುವುದನ್ನೂ ಹೇಳಲಾಗಿದೆ. ಧರ್ಮ ಧರ್ಮಗಳ ನಡುವೆ ದ್ವೇಷದ ಅಪರಾಧಗಳನ್ನು ಖಂಡಿಸಲಾಯಿತು.