Home ಟಾಪ್ ಸುದ್ದಿಗಳು ಫೆಲೆಸ್ತೀನ್ ವಿವಿ ಕಟ್ಟಡದ ಮೇಲೆ ಬಾಂಬ್ ದಾಳಿ: ಇಸ್ರೇಲ್ ನಿಂದ ಸ್ಪಷ್ಟನೆ ಕೇಳಿದ ಅಮೆರಿಕ

ಫೆಲೆಸ್ತೀನ್ ವಿವಿ ಕಟ್ಟಡದ ಮೇಲೆ ಬಾಂಬ್ ದಾಳಿ: ಇಸ್ರೇಲ್ ನಿಂದ ಸ್ಪಷ್ಟನೆ ಕೇಳಿದ ಅಮೆರಿಕ

ಗಾಝಾ: ಫೆಲೆಸ್ತೀನ್ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್ ಮೇಲೆ ಇಸ್ರೇಲ್ ಮಿಲಿಟರಿ (ಐಡಿಎಫ್) ಬಾಂಬ್ ದಾಳಿ ನಡೆಸಿವೆ ಎನ್ನಲಾದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ಸರಕಾರದಿಂದ ಅಮೆರಿಕ ಸ್ಪಷ್ಟೀಕರಣವನ್ನು ಕೇಳಿದೆ.


ಮಧ್ಯ ಗಾಝಾ ಪಟ್ಟಿಯ ಖಾನ್ ಯೂನಿಸ್ ನಗರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.


ಫೆಲೆಸ್ತೀನ್ ವಿಶ್ವವಿದ್ಯಾಲಯದ ಕ್ಯಾಂಪಸ್ ಎಂದು ಹೇಳಲಾಗುವ ಕಟ್ಟಡ ಸ್ಫೋಟಕ್ಕೊ ಮೊದಲು ಪಾಳು ಬಿದ್ದ ಕಟ್ಟಡ ಎಂಬಂತೆ ಕಾಣುತ್ತದೆ. ಕಟ್ಟಡದ ಒಳಗೆ ಬಾಂಬ್ ಗಳನ್ನು ಇಟ್ಟು ಸ್ಫೋಟಿಸಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಹೊರಗಿನಿಂದ ಯಾವುದೇ ಕ್ಷಿಪಣಿ ದಾಳಿ ನಡೆದಿಲ್ಲ ಎಂಬುದು ವಿಡಿಯೊದಲ್ಲಿ ತಿಳಿದು ಬಂದಿದೆ.

Join Whatsapp
Exit mobile version