Home ಟಾಪ್ ಸುದ್ದಿಗಳು ಭಯೋತ್ಪಾದನೆಗೆ ಸರಕಾರಿ ಪ್ರಾಯೋಜಕತ್ವ ನೀಡುವ ದೇಶಗಳ ಪಟ್ಟಿಯಿಂದ ಸುಡಾನ್ ಹೆಸರು ತೆಗೆದ ಅಮೆರಿಕ

ಭಯೋತ್ಪಾದನೆಗೆ ಸರಕಾರಿ ಪ್ರಾಯೋಜಕತ್ವ ನೀಡುವ ದೇಶಗಳ ಪಟ್ಟಿಯಿಂದ ಸುಡಾನ್ ಹೆಸರು ತೆಗೆದ ಅಮೆರಿಕ

ಖರ್ತೌಮ್ : ಸುಡಾನ್ ಮೇಲಿದ್ದ ಸರಕಾರಿ ಭಯೋತ್ಪಾದನಾ ಪ್ರಾಯೋಜಕತ್ವ ಆರೋಪವನ್ನು ಅಮೆರಿಕ ಅಧಿಕೃತವಾಗಿ ತೆಗೆದುಹಾಕಿದೆ. ಖರ್ತೌಮ್ ನಲ್ಲಿರುವ ಅಮೆರಿಕ ಧೂತಾವಾಸ ಕಚೇರಿಯು ಈ ವಿಷಯವನ್ನು ಸೋಮವಾರ ಅಧಿಕೃತವಾಗಿ ಘೋಷಿಸಿದೆ.

ಭಯೋತ್ಪಾದನೆಗೆ ಪ್ರಾಯೋಜಕತ್ವ ಮಾಡುವ ದೇಶಗಳ ಪಟ್ಟಿಯಿಂದ ಸುಡಾನ್ ಅನ್ನು ಕೈಬಿಡುವಂತೆ ಅಕ್ಟೋಬರ್ ನಲ್ಲಿ ಎರಡೂ ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಮಾಡಿದ್ದವು. ತಾನ್ಝಾನಿಯಾ ಮತ್ತು ಕೀನ್ಯಾದ ಅಮೆರಿಕ ರಾಯಭಾರಿ ಕಚೇರಿ ಮೇಲೆ 1998ರಲ್ಲಿ ನಡೆದ ಬಾಂಬ್ ದಾಳಿಯ ಸಂತ್ರಸ್ತರಿಗೆ 335 ಮಿಲಿಯನ್ ಡಾಲರ್ ಸುಡಾನ್ ಒಪ್ಪಿಕೊಳ್ಳುವ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಸುಡಾನ್ ಅನ್ನು 1993ರಲ್ಲಿ ಈ ಪಟ್ಟಿಗೆ ಸೇರಿಸಲಾಗಿತ್ತು. ಅಲ್ ಖೈದಾಗೆ ಸುಡಾನ್ ನೆಲೆ ನೀಡಿತ್ತು ಎಂಬ ಆರೋಪಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿತ್ತು. ಈ ಪಟ್ಟಿಯಿಂದ ಸುಡಾನ್ ಕೈಬಿಡುವ ಮೂಲಕ, ಆ ದೇಶಕ್ಕೆ ಸಾಕಷ್ಟು ಆರ್ಥಿಕ ನೆರವು ಹರಿದುಬರಲು ಸಹಕಾರಿಯಾಗಲಿದೆ.  

Join Whatsapp
Exit mobile version