Home ಟಾಪ್ ಸುದ್ದಿಗಳು ಉಕ್ರೇನ್ ಗೆ ಸೇನಾ ತುಕಡಿ ಕಳುಹಿಸಲ್ಲ; ನ್ಯಾಟೋ ಪ್ರದೇಶದ ರಕ್ಷಣೆಗೆ ಒತ್ತು: ಅಮೆರಿಕ ಅಧ್ಯಕ್ಷ ಜೋ...

ಉಕ್ರೇನ್ ಗೆ ಸೇನಾ ತುಕಡಿ ಕಳುಹಿಸಲ್ಲ; ನ್ಯಾಟೋ ಪ್ರದೇಶದ ರಕ್ಷಣೆಗೆ ಒತ್ತು: ಅಮೆರಿಕ ಅಧ್ಯಕ್ಷ ಜೋ ಬೈಡೆನ್

ವಾಷಿಂಗ್ಟನ್: ರಷ್ಯಾ – ಉಕ್ರೇನ್ ಯುದ್ಧದ ಭೀಕರ ಪರಿಸ್ಥಿತಿಯ ಮಧ್ಯೆ ಪ್ರತಿಕ್ರಿಯಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ರಷ್ಯಾ ವಿರುದ್ಧ ಸಂಘರ್ಷ ನಡೆಸಲು ಉಕ್ರೇನ್’ಗೆ ತನ್ನ ಸೇನಾ ತುಕಡಿಯನ್ನು ಕಳುಹಿಸುವುದಿಲ್ಲ. ಆದರೆ ಅಮೆರಿಕ ತನ್ನ ಮಿತ್ರರಾಷ್ಟ್ರಗಳ ನೆರವಿನೊಂದಿಗೆ ನ್ಯಾಟೋ ಪ್ರದೇಶಗಳನ್ನು ರಕ್ಷಿಸಲಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

ಅಮೆರಿಕ ಮತ್ತು ಮಿತ್ರರಾಷ್ಟ್ರಗಳು ತನ್ನ ಸಾಮೂಹಿಕ ಸಾಮರ್ಥ್ಯದ ಮೂಲಕ ನ್ಯಾಟೋ ಪ್ರದೇಶದ ಪ್ರತಿ ಇಂಚನ್ನೂ ಸಂರಕ್ಷಿಸುತ್ತವೆ ಎಂದು ಅವರು ತಿಳಿಸಿದ್ದಾರೆ.

ಉಕ್ರೇನ್ ಜನತೆ ಆತ್ಮಸ್ಥೈರ್ಯದಿಂದ ರಣರಂಗದಲ್ಲಿ ಹೋರಾಡುತ್ತಿದ್ದಾರೆ. ರಷ್ಯಾ ಅಧ್ಯಕ್ಷ ಪ್ರಸಕ್ತ ಯುದ್ಧದಲ್ಲಿ ಲಾಭವನ್ನು ಗಳಿಸಬಹುದು. ಆದರೆ ಭವಿಷ್ಯದಲ್ಲಿ ಇದಕ್ಕೆ ಭಾರೀ ಬೆಲೆಯನ್ನು ತೆರಬೇಕಾಗಬಹುದು ಎಂದು ಬೈಡೆನ್ ಎಚ್ಚರಿಸಿದ್ದಾರೆ.

ಪೋಲೆಂಡ್, ರೊಮೇನಿಯಾ, ಲಾಟ್ವಿಯಾ, ಲಿಥುವೇನಿಯಾ ಮತ್ತು ಎಸ್ಟೋನಿಯಾ ಸೇರಿದಂತೆ ನ್ಯಾಟೋ ದೇಶಗಳನ್ನು ಸಂರಕ್ಷಿಸಲು ಅಮೆರಿಕವು ಭೂಪಡೆ, ನೌಕಾಪಡೆ ಮತ್ತು ವಾಯುಪಡೆಗಳನ್ನು ಸಜ್ಜುಗೊಳಿಸಿದೆ ಎಂದು ಬೈಡೆನ್ ತಿಳಿಸಿದ್ದಾರೆ.

Join Whatsapp
Exit mobile version