Home ಟಾಪ್ ಸುದ್ದಿಗಳು ಗ್ಲಾಸ್ಗೋ ಕಾಪ್ 26 ಸಮ್ಮೇಳನದಲ್ಲಿ ನಿದ್ದೆಗೆ ಜಾರಿದ ಅಮೆರಿಕ ಅಧ್ಯಕ್ಷ ಜೋ ಬೈಡನ್

ಗ್ಲಾಸ್ಗೋ ಕಾಪ್ 26 ಸಮ್ಮೇಳನದಲ್ಲಿ ನಿದ್ದೆಗೆ ಜಾರಿದ ಅಮೆರಿಕ ಅಧ್ಯಕ್ಷ ಜೋ ಬೈಡನ್

ಗ್ಲಾಸ್ಗೋ: ಜಾಗತಿಕ ಸಮಸ್ಯೆಯಾಗಿರುವ ತಾಪಮಾನ ಏರಿಕೆ ಕುರಿತ ಕಾಪ್ 26 ಶೃಂಗಸಭೆಯಲ್ಲಿ ವಿಶ್ವನಾಯಕರ ಭಾಷಣದ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿದ್ದೆಗೆ ಜಾರಿರುವ ವೀಡಿಯೋ ವೈರಲಾಗಿದೆ.


ಕಾಪ್ 26 ಶೃಂಗಸಭೆಯ ಭಾಷಣದ ವೇಳೆ ನಿಗದಿತ ಆಸನದಲ್ಲಿ ಮಾಸ್ಕ್ ಧರಿಸಿ ಕುಳಿತಿದ್ದ ಬೈಡನ್ ಅಲ್ಲಿಯೇ ನಿದ್ರೆಗೆ ಜಾರಿದ್ದರು. ಆದರೆ, ಈ ವೇಳೆ ಅಧಿಕಾರಿಯೊಬ್ಬರು ಏನನ್ನೋ ವಿಚಾರಿಸುವ ಸಲುವಾಗಿ ಅವರ ಹಿಂಬದಿಯಿಂದ ಬಂದು ಎಚ್ಚರಿಸಿದ್ದಾರೆ.
ಜೋ ಬೈಡನ್ ತೂಕಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರ- ವಿರೋಧ ಚರ್ಚೆಗಳು ಆರಂಭವಾಗಿದೆ.


ವಿಶ್ವದ ಪ್ರಮುಖ ನಾಯಕರು ಹವಾಮಾನ ವೈಪರೀತ್ಯ ಕುರಿತ ಭಾಷಣ ಮಾಡಿದ್ದು, ಭಾರತವೂ ಸಹ ಇಲ್ಲಿ ತನ್ನ ನಿಲುವು ಪ್ರಸ್ತಾಪಿಸಿದೆ.

Join Whatsapp
Exit mobile version