Home ಟಾಪ್ ಸುದ್ದಿಗಳು ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ಧ ಕೆಂಗಣ್ಣು ಬೀರಿದ ಅಮೆರಿಕ ಅಧ್ಯಕ್ಷ ಬೈಡನ್

ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ಧ ಕೆಂಗಣ್ಣು ಬೀರಿದ ಅಮೆರಿಕ ಅಧ್ಯಕ್ಷ ಬೈಡನ್

ವಾಷಿಂಗ್ಟನ್: ಇಸ್ರೇಲ್ ಇದೀಗ ಮಿತ್ರರಾಷ್ಟ್ರ ಅಮೆರಿಕದ ಖಂಡನೆಗೆ ಗುರಿಯಾಗಿದೆ. ತಾತ್ಕಾಲಿಕ ಕದನ ವಿರಾಮದ ಬಳಿಕ ಗಾಝಾಪಟ್ಟಿಯಲ್ಲಿ ತನ್ನ ಸೇನಾದಾಳಿ ಮುಂದುವರೆಸಿರುವ ಇಸ್ರೇಲ್ ಕ್ರಮವನ್ನು ಅಮೆರಿಕ ಖಂಡಿಸಿದೆ.

ಗಾಝಾದಲ್ಲಿ ಇಸ್ರೇಲ್ ಸೈನಿಕರು ಕಾರ್ಯಾಚರಣೆ ನಡೆಸುತ್ತಿದ್ದು, ಇದರಿಂದ ಅಲ್ಲಿನ ಸ್ಥಳೀಯರು ತಮ್ಮ ಮನೆ-ಆಸ್ತಿಪಾಸ್ತಿಗಳನ್ನು ತೊರೆದು ಜೀವರಕ್ಷಣೆಗಾಗಿ ಓಡುವಂತಾಗಿದೆ. ಇದಕ್ಕೆ ಕೊನೆಯಾಗಬೇಕು, ನೆತನ್ಯಾಹು ಹಟ ಬಿಡಬೇಕು. ನೆತನ್ಯಾಹು ಒಳ್ಳೆಯ ಸ್ನೇಹಿತ, ಆದರೆ ಅವರು ಬದಲಾಗಬೇಕು ಎಂದು ನಾನು ಭಾವಿಸುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಎರಡು ರಾಷ್ಟ್ರ ಪರಿಹಾರ ಕ್ರಮವನ್ನು ವಿರೋಧಿಸಿರುವ ಇಸ್ರೇಲಿ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಮತ್ತು ಅವರ ಒಕ್ಕೂಟದ ಸದಸ್ಯರ ನಿಲುವನ್ನು ಟೀಕಿಸಿದ ಜೋ ಬೈಡನ್, ಗಾಝಾದಲ್ಲಿ ತನ್ನ ವಿವೇಚನಾರಹಿತ ಬಾಂಬ್ ದಾಳಿಯಿಂದಾಗಿ ಇಸ್ರೇಲ್ ಜಾಗತಿಕ ಬೆಂಬಲವನ್ನು ಕಳೆದುಕೊಳ್ಳುತ್ತಿದೆ ಎಂದು ಎಚ್ಚರಿಸಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ವಾಷಿಂಗ್ಟನ್‌ನಲ್ಲಿ ಎಐಪಿಎಸಿ ಮಂಡಳಿಯ ಮಾಜಿ ಅಧ್ಯಕ್ಷ ಲೀ ರೋಸೆನ್ಬರ್ಗ್ ಆಯೋಜಿಸಿದ್ದ ಪ್ರಚಾರ ನಿಧಿಸಂಗ್ರಹಣೆಯ ಸಂದರ್ಭದಲ್ಲಿ ಪಾಲ್ಗೊಂಡು ಬೈಡನ್ ಮಾತನಾಡಿದರು.

ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಮಂತ್ರಿ ಬೆನ್ ಜಿವಿರ್ ಅವರನ್ನೂ ಟೀಕಿಸಿದ ಬೈಡನ್, ಇದು ಇಸ್ರೇಲ್‌ನ ಇತಿಹಾಸದಲ್ಲಿ ಅತ್ಯಂತ ಸಂಪ್ರದಾಯವಾದಿ ಸರ್ಕಾರವಾಗಿದೆ. ದಶಕಗಳಿಂದ ಇಸ್ರೇಲಿ ನಾಯಕರನ್ನು ತಿಳಿದಿದ್ದೇವೆ. ಬೆನ್ ಜಿವಿರ್ ಮತ್ತು ಕಂಪನಿ ಮತ್ತು ಹೊಸ ಜನರು ದೂರದಿಂದಲೇ ಎರಡು-ರಾಷ್ಟ್ರ ಪರಿಹಾರವನ್ನು ಸಮೀಪಿಸುವುದನ್ನು ಬಯಸುವುದಿಲ್ಲ. ಇದು ಸರಿಯಲ್ಲ ಎಂದು ಹೇಳಿದ್ದಾರೆ.

Join Whatsapp
Exit mobile version