27 ವರ್ಷಗಳ ಟೆನಿಸ್ ವೃತ್ತಿಜೀವನ ಮುಕ್ತಾಯ
ವರ್ಷದ ಕೊನೆಯ ಗ್ರ್ಯಾನ್ ಸ್ಲಾಮ್ ಯುಎಸ್ ಓಪನ್ ಟೂರ್ನಿಯಿಂದ ಅಮೆರಿಕದ ಹಿರಿಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಸೋತು ನಿರ್ಗಮಿಸಿದ್ದಾರೆ. ಮಹಿಳೆಯರ ಸಿಂಗಲ್ಸ್ ನ ಮೂರನೇ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಅಜ್ಲಾ ಟೊಮ್ಲಜಾನೋವಿಕ್ಗೆ ಶರಣಾದರು. 3-ಗಂಟೆ 5 ನಿಮಿಷಗಳ ಹೋರಾಟದಲ್ಲಿ ಸೆರೆನಾ, 7-5, 6-7 (4/7) 6-1 ಸೆಟ್ಗಳ ಅಂತರದಲ್ಲಿ ನಿರಾಸೆ ಅನುಭವಿಸಿದರು.
ಇದರೊಂದಿಗೆ 23 ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್, ವಿಲಿಯಮ್ಸ್ ಅವರ ಸುದೀರ್ಘ 27 ವರ್ಷಗಳ ಟೆನಿಸ್ ವೃತ್ತಿಜೀವನಕ್ಕೆ ತೆರೆಬಿದ್ದಿದೆ. ಯುಎಸ್ ಓಪನ್ ತಮ್ಮ ಟೆನಿಸ್ ಜೀವನದ ಕೊನೆಯ ಟೂರ್ನಿಯಾಗಿರಲಿದೆ ಎಂದು ಮುಂದಿನ ತಿಂಗಳು 41ನೇ ವರ್ಷಕ್ಕೆ ಕಾಲಿಡಲಿರುವ ಸೆರೆನಾ ಈ ಹಿಂದೆಯೇ ಘೋಷಿಸಿದ್ದರು.
ಪಂದ್ಯದ ಬಳಿಕ ಮಾತನಾಡಿದ ಸೆರೆನಾ, ʻಟೆನಿಸ್ ನಲ್ಲಿ ಈ ಹಂತದ ಯಶಸ್ಸು ಪಡೆಯಲು ನನ್ನ ಬೆನ್ನಿಗೆ ನಿಂತ ಪ್ರತಿಯೊಬ್ಬರಿಗೂ ನಾನು ತುಂಬಾ ಕೃತಜ್ಞನಾಗಿದ್ದೇನೆʼ ಎಂದು ಹೇಳಿದ್ದಾರೆ.
ಮತ್ತೆ ಟೆನಿಸ್ ಕೋರ್ಟ್’ಗೆ ಮರಳುತ್ತೀರಾ ಎಂಬ ಪ್ರಶ್ನೆ ಉತ್ತರಿಸಿದ ಸೆರೆನಾ, ಮತ್ತೆ ಮೈದಾನಕ್ಕೆ ಮರಳುತ್ತೇನೆ ಎಂದು ನನಗೆ ಅನಿಸುವುದಿಲ್ಲ, ಆದರೆ ಮುಂದೇನಾಗಬಹುದು ಎಂಬುದು ನನಗೆ ಗೊತ್ತಿಲ್ಲʼ ಎಂದಿದ್ದಾರೆ.
ನನ್ನ ಜೀವನದ ಈ ಪ್ರಯಾಣವನ್ನು ತುಂಬಾ ಆನಂದಿಸಿದ್ದೇನೆ. ಇದೊಂದು ನಂಬಲಾಗದ ಅನುಭವವಾಗಿದೆ. ಪ್ರತಿ ಹಂತದಲ್ಲೂ ಪ್ರೋತ್ಸಾಹಿಸಿದ ಪ್ರತಿಯೊಬ್ಬ ವ್ಯಕ್ತಿಗೆ ನಾನು ಕೃತಜ್ಞನಾಗಿದ್ದೇನೆ. ನಿಮ್ಮಿಂದಾಗಿ ನಾನು ಇಂದು ಇಲಿ ನಿಂತಿದ್ದೇನೆ ಎಂದು ಸೆರೆನಾ ಭಾವುಕರಾಗಿ ಹೇಳಿದರು.
ಇದೇ ವೇಳೆ ತಮ್ಮ ಹೆತ್ತವರಾದ ರಿಚರ್ಡ್ ವಿಲಿಯಮ್ಸ್ – ಒರೆಸಿನ್ ಪ್ರೈಸ್ ಹಾಗೂ ಅಕ್ಕ ವೀನಸ್ ವಿಲಿಯಮ್ಸ್ ಅವರ ಪ್ರೋತ್ಸಾಹ ಮತ್ತು ತ್ಯಾಗವನ್ನು ಮರೆಯಲು ಸಾಧ್ಯವೇ ಇಲ್ಲ ಎಂದ ಸೆರೆನಾ, ಎಲ್ಲವೂ ಪೋಷಕರಿಂದಲೇ ಪ್ರಾರಂಭವಾಯಿತು. ಆದರೆ ವೀನಸ್ ಇಲ್ಲದೇ ಇರುತ್ತಿದ್ದರೆ ಸೆರೆನಾಳನ್ನು ನೋಡಲು ನಿಮಗೆ ಸಾಧ್ಯವಾಗುತ್ತಿರಲಿಲ್ಲ. ಮೂವರಿಗೂ ನಾನು ಆಭಾರಿಯಾಗಿದ್ದೇನೆ ಎಂದರು. ಅನ್ನು ಸೂಪರ್ ಸ್ಟಾರ್ ಡಮ್ ನ ಹಾದಿಯಲ್ಲಿ ಇರಿಸಿದರು. ಈ ವೇಳೆ ವೀನಸ್ ವಿಲಿಯಮ್ಸ್ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದರು.